ಹಾಸ್ಟೆಲ್ ಯುವಕನ ಮಾಸ್ಟರ್​ ಪ್ಲಾನ್​ಗೆ ಬೆಚ್ಚಿಬಿದ್ದ ಸಿಬ್ಬಂದಿ; ಸೂಟ್‌ಕೇಸ್‌ನಲ್ಲಿದ್ದಳು ಆತನ ಪ್ರೇಯಸಿ| Viral vedeo

viral
Published on

ಹರಿಯಾಣ| ಕೆಲ ಹಾಸ್ಟೆಲ್​ ಯುವಕರು ಆಗಾಗ ಒಂದಲ್ಲಾ ಒಂದು ರೀತಿಯ ಮಾಡಬಾರದ ಕೆಲಸವನ್ನು ಮಾಡಿ ನೋಡುವ ಜನರ ಟೀಕೆಗೆ ಗುರಿಯಾಗುತ್ತಿರುತ್ತಾರೆ. ಅಂದಹಾಗೆ ಇಲ್ಲೊಬ್ಬ ವ್ಯಕ್ತಿ ತನ್ನ ಮಾಸ್ಟರ್​ ಪ್ಲಾನ್​ ಉಪಯೋಗಿಸಿ ಆತನ ಗರ್ಲ್​ ಫ್ರೆಂಡ್​ನ್ನು ಸೂಟ್​ಕೇಸ್​ನಲ್ಲಿ ಬಚ್ಚಿಟ್ಟು ಕರೆತರುವಾಗ ಅಲ್ಲಿನ ಸಿಬ್ಬಂದಿ ಕೈಗೆ ತಗ್ಲಾಕೊಂಡಿದ್ದಾನೆ.

ಹರಿಯಾಣದ ಖಾಸಗಿ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಯೊಬ್ಬ ತನ್ನ ಹುಡುಗಿಯನ್ನು ವಿಶ್ವವಿದ್ಯಾಲಯದ ಬಾಲಕರ ಹಾಸ್ಟೆಲ್‌ಗೆ ದೊಡ್ಡ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇನ್ನೂ ಆತ ಆ ಹುಡುಗಿಯನ್ನು ಸೂಟ್​ಕೇಸ್​ನಲ್ಲಿ ಬಚ್ಚಿಟ್ಟುಕೊಂಡು ಕರೆತರುತ್ತಿದ್ದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

(ಏಜೆನ್ಸೀಸ್)

ಈ ಘಟನೆಯ ಬಗ್ಗೆ ವಿಶ್ವವಿದ್ಯಾಲಯ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ.

ವಿದ್ಯಾರ್ಥಿಯು ಹಾಸ್ಟೆಲ್ ಆವರಣದೊಳಗೆ ದೊಡ್ಡ ಸೂಟ್‌ಕೇಸ್ ಅನ್ನು ಮುಚ್ಚಲು ಪ್ರಯತ್ನಿಸುತ್ತಿರುವಾಗ, ವಿಶ್ವವಿದ್ಯಾನಿಲಯದ ಭದ್ರತಾ ಸಿಬ್ಬಂದಿ ಆ ವಿದ್ಯಾರ್ಥಿಯನ್ನು ತಡೆಯುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ. ಕ್ಯಾಮೆರಾದಲ್ಲಿ, ಸಿಬ್ಬಂದಿ ಸೂಟ್​ಕೇಸ್​ ತೆರೆಯುವುದನ್ನು ಮತ್ತು ಒಳಗೆ ಸುರುಳಿಯಾಗಿ ಕುಳಿತಿರುವ ಯುವತಿಯನ್ನು ಕಾಣಬಹುದು. ಆ ಹುಡುಗಿ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದಾಳೆಯೇ ಅಥವಾ ಹೊರಗಿನಿಂದ ಬಂದ ಹುಡುಗಿಯೇ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net