ಜಿಎಸ್‌ಟಿ ಪರಿಷ್ಕರಣೆ! ಚಿನ್ನದ ಬೆಲೆಯಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ? ಹೀಗಿದೆ ವರದಿ | Gold GST

gold
Published on

Gold GST: ದೀಪಾವಳಿ ಹಬ್ಬಕ್ಕೆ ದೇಶದ ಜನತೆಗೆ ಬಂಪರ್​ ಗಿಫ್ಟ್ ಕೊಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅಂತೆಯೇ ಜಿಎಸ್​ಟಿ ಸ್ಲ್ಯಾಬ್​ ಕೂಡ ಇದೀಗ ಪರಿಷ್ಕರಣೆಯಾಗುವ ಮುನ್ಸೂಚನೆ ಲಭಿಸಿದ್ದು, ಸಾಮಾನ್ಯ ಜನರ ಬಳಕೆಯ ಅಗತ್ಯ ವಸ್ತುಗಳ ಹೊರೆಯು ಕಡಿಮೆಯಾಗಲಿದೆ.

ಕೇಂದ್ರ ಸರ್ಕಾರವು ಜಿಎಸ್‌ಟಿ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿರುವುದು ನಿಜಕ್ಕೂ ಗಮನಾರ್ಹ ಸಂಗತಿ. ಪ್ರಸ್ತುತ ನಾಲ್ಕು ಸ್ಲ್ಯಾಬ್‌ಗಳ ಬದಲಿಗೆ, ಕೇಂದ್ರವು ಕೇವಲ ಶೇ.5 ಮತ್ತು ಶೇ.18ರಷ್ಟು ಅಂದರೆ ಎರಡು ಸ್ಲ್ಯಾಬ್ ವ್ಯವಸ್ಥೆಯನ್ನು ಮಾತ್ರ ಘೋಷಿಸಿದೆ. ಈ ಸ್ಲ್ಯಾಬ್‌ಗಳ ಪ್ರಕಾರ, ಕೆಲವು ವಸ್ತುಗಳ ಮತ್ತು ವಾಹನಗಳ ಬೆಲೆಗಳು ಅಗ್ಗವಾಗಲಿವೆ. ಇತರ ಕೆಲವು ಸರಕುಗಳು ಮತ್ತು ವಾಹನಗಳ ಬೆಲೆಗಳು ದುಬಾರಿಯಾಗಲಿವೆ. ಹೊಸ ಜಿಎಸ್‌ಟಿ ದರಗಳು ಇದೇ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ ಎಂಬುದು ಮತ್ತೊಂದು ಖುಷಿ ವಿಷಯ.

ಜಿಎಸ್​ಟಿ ಎಫೆಕ್ಸ್​

ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳೊಂದಿಗೆ ಕೇಂದ್ರ ಸರ್ಕಾರ ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆಯನ್ನೇ ನೀಡಲಿದೆ. ಮತ್ತೊಂದೆಡೆ, ತಂಬಾಕು, ತಂಬಾಕು ಉತ್ಪನ್ನಗಳು, ಗುಟ್ಕಾ ಮತ್ತು ಇತರ ಕೆಲವು ಹಾನಿಕಾರಕ ವಸ್ತುಗಳ ಮೇಲೆ ಕೇಂದ್ರವು ಶೇ.40ರಷ್ಟು ತೆರಿಗೆಯನ್ನು ವಿಧಿಸಲಿದೆ. ಇದೊಂದು ರೀತಿ ಪಾಪದ ತೆರಿಗೆ ಆಗಿ ಪರಿಣಾಮ ಬೀರಲಿದೆ ಎಂದೇ ಹೇಳಬಹುದು. ಆದಾಗ್ಯೂ, ಆಭರಣಗಳು, ಚಿನ್ನದ ನಾಣ್ಯಗಳು ಮತ್ತು ಚಿನ್ನದ ಬಾರ್‌ಗಳ ಮೇಲಿನ ಜಿಎಸ್‌ಟಿ ದರವು ಶೇ.3ರಷ್ಟಿದೆ ಮತ್ತು ಉತ್ಪಾದನಾ ಶುಲ್ಕಗಳು ಶೇ.5ರಷ್ಟಿದೆ.

ಪ್ರಸ್ತುತ, ನೀವು 1 ಲಕ್ಷ ರೂ. ಗಡಿದಾಟಿ ಹೋಗಿರುವ ಚಿನ್ನಾಭರಣಗಳನ್ನು ಖರೀದಿಸಿದರೆ, ಚಿನ್ನದ ಮೇಲೆ ಶೇ.3ರಷ್ಟು ಜಿಎಸ್​ಟಿ ಬೀಳಲಿದೆ ಮತ್ತು ಉತ್ಪಾದನಾ ಶುಲ್ಕದ ಮೇಲೆ ಶೇ.5ರಷ್ಟು ಜಿಎಸ್​ಟಿ ಇರಲಿದೆ. ಉದಾಹರಣೆಗೆ, ಚಿನ್ನಾಭರಣಗಳ ಮೇಲಿನ ಉತ್ಪಾದನಾ ಶುಲ್ಕಗಳು 5,000 ರೂ. ಆಗಿದ್ದರೆ, ಈ ಮೊತ್ತದ ಮೇಲೆ ಶೇ.5ರಷ್ಟು ಜಿಎಸ್​ಟಿ ಅಂದರೆ 250 ರೂ. ವಿಧಿಸಲಾಗುತ್ತದೆ. ಇದರರ್ಥ ಆಭರಣದ ಬೆಲೆ ನಿಮಗೆ 1,08,250 ರೂ. ಆಗಿರುತ್ತದೆ. (ಉದಾಹರಣೆಗೆ, 1,00,000 + 3,000 (3% GST) + 5,000 (ತಯಾರಿಕಾ ಶುಲ್ಕಗಳು) + 250 ರೂ. (ತಯಾರಿಕಾ ಶುಲ್ಕಗಳ ಮೇಲೆ 5% GST). ಇದು ಪ್ರಸ್ತುತ ನಿಯಮವಾಗಿದೆ. ಆದಾಗ್ಯೂ, ಪ್ರಸ್ತುತ ಜಿಎಸ್​ಟಿ ಸುಧಾರಣೆಗಳಲ್ಲಿ ಈ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಗಮನಾರ್ಹ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 98,100 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,01,770 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 97,950 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,06,860 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 97,950 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,06,860 ರೂ. ಆಗಿದೆ.

ಬೆಳ್ಳಿ ಬೆಲೆ ಸ್ಥಿರ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,27,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,37,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,37,000 ರೂ. ಇದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net