ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

Untitled
Published on

ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಸ್ವಾಮೀಜಿಗಳನೇಕರು ಭೇಟಿಯಾಗಿ, ಬೆಂಬಲ ಸೂಚಿಸಿದ್ದ ಸಂದರ್ಭದ ದೃಶ್ಯಾವಳಿಯೊಂದು ಬಹಳಷ್ಟು ಕಡೆ ಹರಿದಾಡಿತ್ತು. ಸಿಎಂ ಭೇಟಿ ವೇಳೆ ಎಲ್ಲ ಸ್ವಾಮೀಜಿಗಳಿಗೂ ಒಂದು ಲಕೋಟೆ ಕೊಡಲಾಗಿದ್ದು, ಆ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರಿಂದ ಆ ವಿಡಿಯೋ ಸಾಕಷ್ಟು ಹಂಚಿಕೆ ಆಗಿತ್ತು. ಇದೀಗ ಆ ಕುರಿತು ಸ್ವಾಮೀಜಿಯೊಬ್ಬರು ಮಾತನಾಡಿದ್ದಾರೆ.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಠಾಧೀಶರ ಸಮ್ಮೇಳನದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕಾಣಿಕೆ ಕೊಡುವುದು ಸಂಸ್ಕಾರ, ತೆಗೆದುಕೊಳ್ಳುವುದು ಧರ್ಮ. ನಾಡಿನ ಜನತೆಗಾಗಿ ಕಾಣಿಕೆ ತೆಗೆದುಕೊಳ್ಳುತ್ತೇವೆ. ವಿರೋಧ ಮಾಡುವವರು ಸಂಸ್ಕಾರ ಇರದವರು. ಅಷ್ಟಕ್ಕೂ ಅಂದು ಕೊಟ್ಟ ಲಕೋಟೆಯಲ್ಲಿ ಏನಿತ್ತು ಎಂಬುದು ಗೊತ್ತಿಲ್ಲ. ಆದರೆ ನಾವು ಯಾರಿಗೂ ಮಾರಾಟವಾಗಿಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net