ನಿಂಬೆ ರಸ ಹಿಂಡುವಾಗ ಕಣ್ಣಿಗೆ ಬಿದ್ದರೆ ಮೊದಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ | Lemon Juice

dk - 2025-05-07T200041.640
Published on

Lemon Juice : ನಿಂಬೆರಸ ಹಿಂಡುವಾಗ ಸಾಮಾನ್ಯವಾಗಿಮ ಕಣ್ಣಿಗೆ ಬಿಳೋದು ಸಹಜ. ಇದು ನಿಮಗೆ ಅನುಭವಾಗಿರುತ್ತದೆ. ಕಣ್ಣಿಗೆ ಬಿದ್ದ ತಕ್ಷಣ ಕಣ್ಣು ಉಚ್ಚುವುದರಿಂದ ಉರಿದು ಕೆಂಪಾಗೋದು ಅಪಾಯವಂತೆ? ನಿಂಬೆ ರಸ ಹಿಂಡುವಾಗ ಕಣ್ಣಿಗೆ ಬಿದ್ದರೆ ಮೊದಲು ಏನು ಮಾಡಬೇಕು? ತಜ್ಞರು ಹೇಳೊದೇನು? ತಿಳಿಯೋಣ..

ನಿಂಬೆಹಣ್ಣು ಸಿಟ್ರಿಕ್ ಆಮ್ಲವನ್ನು ಹೊಂದಿದೆ. ನಿಂಬೆಹಣ್ಣಿನ ಈ ಹುಳಿ ರುಚಿ ಬರುವುದು ಈ ಸಿಟ್ರಿಕ್ ಆಮ್ಲದಿಂದಲೇ. ನಿಂಬೆ ರಸದ ಒಂದು ಹನಿ ನಿಮ್ಮ ಕಣ್ಣಿಗೆ ಬಿದ್ದರೂ, ಅದರಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ಕಣ್ಣುಗಳಲ್ಲಿ ತೀವ್ರವಾದ ಉರಿ ಮತ್ತು ಕುಟುಕುವ ಸಂವೇದನೆ ಉಂಟಾಗುತ್ತದೆ. ಆದಾಗ್ಯೂ, ಈ ಸುಡುವ ಸಂವೇದನೆಯು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ. ಈ ಕಿರಿಕಿರಿಯಿಂದಾಗಿ ಕಣ್ಣುಗಳು ಕೆಂಪಾಗಬಹುದು. ನಿಮ್ಮ ಕಣ್ಣಲ್ಲಿ ನೀರು ಬರತ್ತದೆ.

ಹೆಚ್ಚು ನಿಂಬೆ ರಸ ಕಣ್ಣಿಗೆ ಬಿದ್ದರೆ, ಸಲ್ಪ ಸಮಯದವರೆಗೂ ದೃಷ್ಠಿ ಮಸಕಾಗುತ್ತದೆ. ಅದೇ ಸಮಯದಲ್ಲಿ, ನಿಮ್ಮ ಕಣ್ಣುಗಳಲ್ಲಿ ಈಗಾಗಲೇ ಯಾವುದೇ ಸಮಸ್ಯೆ ಇದ್ದರೆ, ಕಣ್ಣಿನ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ.

ನಿಂಬೆ ರಸ ಹಿಂಡುವಾಗ ಕಣ್ಣಿಗೆ ಬಿದ್ದರೆ ಏನು ಮಾಡಬೇಕು?

ನಿಂಬೆ ರಸ ಕಣ್ಣಿಗೆ ಬಿದ್ದರೆ ಅದನ್ನು ಉಜ್ಜಬೇಡಿ. ಇದರಿಂದ ಕಿರಿಕಿರಿ ಅಧಿಕವಾಗಿತ್ತೆ. ಮೊದಲು ನಿಮ್ಮ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಕಣ್ಣುಗಳನ್ನು ಶುದ್ಧ ಮತ್ತು ತಣ್ಣೀರಿನಿಂದ 5 ನಿಮಿಷಗಳ ಕಾಲ ನಿರಂತರವಾಗಿ ತೊಳೆಯುತ್ತಿರಿ. ನಿಮಗೆ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ. ಕಣ್ಣುಗಳಲ್ಲಿ ಸುಡುವ ಮತ್ತು ಕುಟುಕುವ ಸಂವೇದನೆಯು ದೀರ್ಘಕಾಲದವರೆಗೆ ಮುಂದುವರಿದರೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಇನ್ನೂ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ನೀವು ನಿಂಬೆಹಣ್ಣನ್ನು ಹಿಂಡಿದಾಗಲೆಲ್ಲಾ, ನಿಮ್ಮ ಮುಖವನ್ನು ದೂರವಿಡಿ, ಇದರಿಂದ ಯಾವುದೇ ಸಂದರ್ಭದಲ್ಲೂ ನಿಂಬೆ ರಸವು ನಿಮ್ಮ ಕಣ್ಣಿಗೆ ಹೋಗುವುದಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net