Mental Health: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಒತ್ತಡ, ಆತಂಕ ಅಥವಾ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು ಮೊದಲಿಗೆ ಸಾಮಾನ್ಯವೆಂದು ತೋರುತ್ತದೆಯಾದರೂ, ಅವುಗಳನ್ನು ನಿರ್ಲಕ್ಷಿಸುವುದರಿಂದ ಗಂಭೀರ ಆರೋಗ್ಯ ಪರಿಣಾಮಗಳು ಉಂಟಾಗಬಹುದು ಎಂದು ಮನೋವೈದ್ಯರು ಬಹಿರಂಗಪಡಿಸುತ್ತಾರೆ.

ಮಾನಸಿಕ ಆರೋಗ್ಯ ಹದಗೆಟ್ಟಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕಂಡುಬಂದ ತಕ್ಷಣ ಮನೋವೈದ್ಯರನ್ನು ಸಂಪರ್ಕಿಸುವ ಮೂಲಕ ನಿಯಂತ್ರಿಸಬಹುದು.
1. ನಿರಂತರ ಒತ್ತಡ ಹಾಗೂ ಚಿಂತೆ
ಚಿಕ್ಕಪುಟ್ಟ ವಿಷಯಗಳಿಗೂ ಹೆಚ್ಚೆಚ್ಚು ಚಿಂತೆ ಮಾಡುವುದು ಅಥವಾ ನಿರಂತಎರ ಒತ್ತಡದಲ್ಲಿರುವುದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಂಣವಾಗಬಹುದು.
2.ಅಧಿಕ ನಿದ್ರೆ ಅಥವಾ ನಿದ್ರಾ ಹಿನತೆ
ನಿದ್ರಿಸಲು ಸಾಧ್ಯವಾಗದಿರುವುದು. ಆಗ್ಗಾಗೆ ಎಚ್ಚರಗೊಳ್ಳವುದು ಅಥವಾ ಹೆಚ್ಚು ನಿದ್ರೆ ಮಾಡುವುದು. ಇಂತಹ ನಿದ್ರೆ ಸಮಸ್ಯೆಗಳು ಮಾನಸಿಕ ಆರೋಗ್ಯಕ್ಕೆ ಕಾರಣವಾಗಬಹುದು.
3. ಆಸಕ್ತಿಯ ನಷ್ಟ
ನೆಚ್ಚಿನ ಚಟುವಟಿಕೆಗಳು, ಸಾಮಾಜಿಕ ಸಂಬಂಧಗಳು ಅಥವಾ ದೈನಂದಿನ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು.
4.ತೀವ್ರ ಮನಸ್ಥಿತಿ ಏರುಪೇರು
ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಜನರು ಸಂತೋಷಪಡುವಂತೆ ಮತ್ತು ಇನ್ನು ಕೆಲವೊಮ್ಮೆ ದುಃಖ ಅಥವಾ ಕೋಪಗೊಳ್ಳುವಂತೆ ಮಾಡುವ ಬೈಪೋಲಾರ್ ಡಿಸಾರ್ಡರ್‌ನಂತಹ ಸಮಸ್ಯೆಗಳನ್ನು ಕಾಣಬಹುದು.
5.ಹಸಿವು ಅಥವಾ ತೂಕದಲ್ಲಿ ಬದಲಾವಣೆ
ಹಸಿವಿನ ಕೊರತೆ, ಅತಿಯಾಗಿ ತಿನ್ನುವುದು ಅಥವಾ ಅನಿರೀಕ್ಷಿತ ತೂಕ ನಷ್ಟ ಅಥವಾ ಹೆಚ್ಚಳವು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದು.
6.ಏಕಾಗ್ರತೆಯ ಕೊರತೆ
ಕೆಲಸದಲ್ಲಿ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ಏಕಾಗ್ರತೆಯ ನಷ್ಟ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆ, ಮಾನಸಿಕ ಒತ್ತಡ ಅಥವಾ ಖಿನ್ನತೆ ಇವೆಲ್ಲವೂ ಮಾನಸಿಕ ಸಮಸ್ಯೆಗಳ ಲಕ್ಷಣಗಳಾಗಿವೆ.
7.ನೋವುಗಳು
ತಲೆನೋವು, ದೇಹದ ನೋವು ಅಥವಾ ಹೊಟ್ಟೆ ಸಮಸ್ಯೆಗಳು ಮಾನಸಿಕ ಒತ್ತಡಕ್ಕೆ ಸಂಬಂಧಿಸಿರಬಹುದು.
8.ಏಕಾಂತ ಬಯಸುತ್ತಿದೆ
ಸಾಮಾಜಿಕ ಸಂಬಂಧಗಳನ್ನು ತಪ್ಪಿಸುವುದು ಮತ್ತು ಒಂಟಿಯಾಗಿರಲು ಬಯಸುವುದು ಖಿನ್ನತೆ ಅಥವಾ ಸಾಮಾಜಿಕ ಆತಂಕದ ಅಸ್ವಸ್ಥತೆಯ ಸಂಕೇತವಾಗಿದೆ.
9.ಅತಿಯಾಗಿ ಯೋಚಿಸುವುದು
ಒಂದೇ ವಿಷಯದ ಬಗ್ಗೆ ಅಥವಾ ಭಯದ ಬಗ್ಗೆ ಪದೇ ಪದೇ ಯೋಚಿಸುವುದು ಒಸಿಡಿ (ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಅಥವಾ ಆತಂಕದ ಅಸ್ವಸ್ಥತೆಗಳ ಸಂಕೇತವಾಗಿದೆ.
10.ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು
ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಆತ್ಮಹತ್ಯೆಯ ಬಗ್ಗೆ ಯೋಚಿಸುವುದು ಅಥವಾ ಈ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಗಂಭೀರ ಮಾನಸಿಕ ಸಮಸ್ಯೆಗಳ ಸಂಕೇತವಾಗಿದೆ. ಅಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಬೇಕು.(ಏಜೆನ್ಸೀಸ್)
ಮೊದಲ ಡೋಸ್ ಲಸಿಕೆ ಪಡೆದ ತೋಳಿಗೆ ಮತ್ತೊಂದು ಡೋಸ್ ಪಡೆಯವುದು ಉತ್ತಮವೇ?: ಹೊಸ ಅಧ್ಯಯನ ಹೇಳಿದ್ದೇನು? | Vaccine
ಬೆವರಿನ ವಾಸನೆಯಿಂದ ಮುಜುಗರವಾಗುತ್ತಿದೆಯೇ?: ಇದರಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಮಾರ್ಗ | Sweat