

Chennai: ರಾಜ್ಯದಲ್ಲಿ ಇಡೀ ಸರ್ಕಾರವೇ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವಾಗ ಪಾರ್ಟ್ ಟೈಂ ಡಿಸಿಎಂ ಡಿ.ಕೆ.ಶಿವಕುಮಾರ್ ತಮಗೆ ಸಂಬಂಧವೇ ಇಲ್ಲದಂತೆ ಚೆನ್ನೈ ಪ್ರವಾಸ ಕೈಗೊಂಡಿದ್ದಾರೆ ಎಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ವ್ಯಂಗ್ಯವಾಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಶೋಕ, '' ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ತಾವು ಚೆನ್ನೈ ಪ್ರವಾಸ ಕೈಗೊಂಡಿರುವುದು ಯಾವ ಪುರುಷಾರ್ಥಕ್ಕಾಗಿ ಎನ್ನುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಡಿಸಿಎಂಗೆ ಕೆಲ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ''.
ಮರೀನಾ ಬೀಚ್ನಲ್ಲಿ ಪಾದಯಾತ್ರೆ ಮಾಡಿ ಮೇಕೆದಾಟು ಯೋಜನೆಗೆ NOC ನೀಡುವಂತೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಮೇಲೆ ಒತ್ತಡ ಹೇರುತ್ತೀರಾ?
ಮೇಕೆದಾಟು ಯೋಜನೆಗೆ ಅವಕಾಶ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಡಿಎಂಕೆ ಪಕ್ಷದ ನಾಯಕರ ನಟ್ಟು-ಬೋಲ್ಟು ಟೈಟು ಮಾಡುತ್ತೀರಾ?, ಅಥವಾ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನ ಕೆ.ಆರ್.ಎಸ್ ನಲ್ಲಿ ಕಾವೇರಿ ಆರತಿಗೆ ಆಹ್ವಾನಿಸಿ, ಕಾವೇರಿ ನೀರನ್ನ ಕೊಳ್ಳೆ ಹೊಡೆದು ಕನ್ನಡಿಗರ ಹಿತಾಸಕ್ತಿಗೆ ಕೊಳ್ಳಿ ಇಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.