ಮುಂಬೈ ದಾಳಿಯ ನಂತರ ನೀವು ಮಾಡಿದ್ದೇನು? ವಿಪಕ್ಷಗಳ ಪ್ರಶ್ನೆಗೆ ಜೈಶಂಕರ್​ ತಿರುಗೇಟು!Jaishankar

Jaishankar
Published on

Jaishankar: 2008 ರ ಮುಂಬೈ ಉಗ್ರ ದಾಳಿಯ ನಂತರ ಹಿಂದಿನ UPA ಸರ್ಕಾರ ಏನು ಮಾಡಿತು ಎಂದು ವಿಪಕ್ಷಗಳ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್​  ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಆಪರೇಷನ್ ಸಿಂಧೂರ ಕುರಿತ ಕೇಂದ್ರದ ನಿರ್ಧಾರಗಳು ಮತ್ತು ಭಯೋತ್ಪಾದನೆಗೆ ಭಾರತ ಪ್ರತಿಕ್ರಿಯಿಸಿದ ವಿಧಾನವನ್ನು ಪ್ರಶ್ನಿಸುತ್ತಾರೆ. ಆದರೆ, 26 ನವೆಂಬರ್ 2008 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ಮಾಡಿದರು. ನಿಮ್ಮ ಅಡಳಿತದಲ್ಲಿ ಪ್ರತಿಕ್ರಿಯೆ ಏನಿತ್ತು? ನಿಮ್ಮ ಪ್ರತಿಕ್ರಿಯೆ ಎಂದರೆ ಶರ್ಮ್-ಎಲ್-ಶೇಖ್ ಆಗಿತ್ತು ಎಂದು ಜೈಶಂಕರ್​ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಅಲ್ಲದೆ, ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮುಂದುವರೆಸಿದ ವಿದೇಶಾಂಗ ಸಚಿವ, ಮುಂಬೈ ದಾಳಿ ನಡೆದ ಸಂದರ್ಭದಲ್ಲಿ ಏನನ್ನೂ ಮಾಡದ ಜನರು, ಬಹವಾಲ್ಪುರ್ ಮತ್ತು ಮುರಿಡ್ಕೆ ಭಯೋತ್ಪಾದಕ ತಾಣಗಳನ್ನು ಉರುಳಿಸಿದ ಸರ್ಕಾರವನ್ನು ಪ್ರಶ್ನಿಸುವ ಧೈರ್ಯವನ್ನು ಹೊಂದಿರುತ್ತಾರೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಆಪರೇಷನ್​ ಸಿಂಧೂರವನ್ನು ನೀವು ಏಕೆ ನಿಲ್ಲಿಸಿದ್ದೀರಿ ಎಂದು ನಮಗೆ ಕೇಳಲಾಯಿತು? ನೀವು ಏಕೆ ಮುಂದೆ ಹೋಗಲಿಲ್ಲ? ಆದರೆ, 26/11 ರ ನಂತರ, ನಿಮ್ಮ ಸರ್ಕಾರದ ನಿಷ್ಕ್ರಿಯತೆಯನ್ನು ಅತ್ಯುತ್ತಮ ಕ್ರಮ ಎಂದು ಭಾವಿಸಿದ ಜನರು ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು  ಜೈಶಂಕರ್​ ತೀವ್ರವಾಗಿ ಟೀಕಿಸಿದರು.

2008 ಮುಂಬೈ ದಾಳಿ ನಡೆದ ನಂತರ ಈಜಿಪ್ಟ್​ ನಗರವಾದ ಶರ್ಮ್-ಎಲ್-ಶೇಖ್‌ನಲ್ಲಿ ಹಿಂದಿನ ಯುಪಿಎ ಸರ್ಕಾರ ಮತ್ತು ಪಾಕಿಸ್ತಾನಿ ಪ್ರಧಾನಿಗಳು ಭಯೋತ್ಪಾದನೆ ಎರಡೂ ದೇಶಗಳಿಗೆ ಪ್ರಮುಖ ಬೆದರಿಕೆಯಾಗಿದೆ ಎಂದು ಒಪ್ಪಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net