ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳಾವುವು?

Heart Symbol
Published on

ಬೆಂಗಳೂರು: ಆರೋಗ್ಯ ಎನ್ನುವುದು ಬಹುಮುಖ್ಯವಾಗಿದೆ. ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಅಗತ್ಯವಿರುವ ಕೆಲವು ಪ್ರಮುಖ ಪೋಷಕಾಂಶಯುಕ್ತ ಆಹಾರವನ್ನು ಪ್ರತಿದಿನ ಸೇವಿಸುವುದರ ಜತೆಗೆ ವೈದ್ಯರ ಸಲಹೆ ಮೇರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಬನ್ನಿ ನಾವು ಇಂದು ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಮುಂಜಾಗೃತಾ ಕ್ರಮಗಳ ಕುರಿತಾಗಿ ತಿಳಿದುಕೊಳ್ಳೋಣ.....

ಲಕ್ಷಣ: ಹೃದಯಾಘಾತದ ಸಂಕೇತ ಎದೆ ನೋವು, ಅಸ್ವಸ್ಥತೆ, ನೋವು, ಉಸಿರಾಟದ ತೊಂದರೆ, ಮೈ ಬೆವರುವುದು, ಕುತ್ತಿಗೆ, ಬೆನ್ನು ಮತ್ತು ಭುಜಗಳಲ್ಲಿ ನೋವು ಬರುವುದು, ವಾಕರಿಕೆಯ ಅನುಭವ, ನಿಧಾನಕ್ಕೆ ತಲೆ ತಿರುಗಿದಂತಾಗುವುದು ಅಥವಾ ದಣಿದಿರುವ ಭಾವ ಈ ಎಲ್ಲಾ ಲಕ್ಷಣಗಳು ಇರಬಹುದು.

ಈ ರೋಗಲಕ್ಷಣಗಳನ್ನು ರೋಗಿಯು ನಿರ್ಲಕ್ಷಿಸಬಹುದು. ಆ ಕಾರಣಕ್ಕೆ ನಾವು ಇದನ್ನು ಸಡನ್‌ ಹಾರ್ಟ್‌ ಆಟ್ಯಾಕ್‌ ಎಂದು ಕರೆಯಬಹುದು. ಕೆಲವೊಮ್ಮೆ ತಮ್ಮಲ್ಲಿ ಈ ಮೇಲಿನ ಲಕ್ಷಣಗಳಿದ್ದರೂ ಅದನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಈ ನಿರ್ಲಕ್ಷ್ಯ ಭಾವವೇ ಹೃದಯಾಘಾತಕ್ಕೆ ಕಾರಣವಾಗಬಹುದು ಎನ್ನುತ್ತಾರೆ

1) ಆರೋಗ್ಯಕರ ಆಹಾರ ಸೇವನೆಯ ಮೂಲಕ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಇದರೊಂದಿಗೆ ನಿರಂತರ ವ್ಯಾಯಾಮ, ತೂಕ ನಿಯಂತ್ರಣ, ಧೂಮಪಾನ, ಮಧ್ಯಪಾನ , ಕಲುಷಿತ ವಾತಾವರಣದಿಂದ ಸಾಧ್ಯವಾದಷ್ಟು ದೂರ ಇರುವುದು ಇದರಿಂದ ಹೃದಯಾಘಾತವನ್ನು ತಡೆಯಬಹುದು.

ಮುಂಜಾಗೃತಾಕ್ರಮಗಳು:

2) ಅಧಿಕರಕ್ತದೊತ್ತಡ, ಮಧುಮೇಹ, ಅತಿಯಾದ ಮಧ್ಯಪಾನ ಸೇವನೆಯೂ ಹೃದಯಾಘಾತಕ್ಕೆ ಪ್ರಮುಖ ಕಾರಣ ಇರಬಹುದು. ಆರೋಗ್ಯ ತಜ್ಞರ ಸಲಹೆ ಪಡೆದು ಪ್ರತಿನಿತ್ಯ ಯೋಗ, ಧ್ಯಾನದ ಮೂಲಕ ಒತ್ತಡ ನಿಯಂತ್ರಿಸಿಕೊಳ್ಳುವುದರಿಂದಲೂ ಹೃದಯಾಘಾತವನ್ನು ತಡೆಯಬಹುದು.

3) ʼರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಅನ್ನು ನಿರಂತರವಾಗಿ ಪರೀಕ್ಷೆ ಮಾಡುತ್ತಿರಬೇಕು.ಚೆನ್ನಾಗಿ ನೀರು ಕುಡಿಯುತ್ತಿರಬೇಕು.

4) ಸಮತೋಲಿತ ಆಹಾರ ಸೇವನೆ ಹಾಗೂ ಚೆನ್ನಾಗಿ ನಿದ್ದೆ ಮಾಡುವುದು, ಒತ್ತಡದಿಂದ ಮುಕ್ತರಾಗುವುದು ಹಾಗೂ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಹೃದಯಾಘಾತವನ್ನು ದೂರ ಮಾಡಲು ಸಹಾಯ ಮಾಡಬಹುದು.

5) ದೇಹದ ಮೇಲೆ ಒತ್ತಡ ಹಾಕಬೇಡಿ. ನಿಮ್ಮ ದಿನನಿತ್ಯದ ಜೀವನ ಶೈಲಿಯಂತೆ ನಡೆದುಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net