ಕಿಡ್ನಿ ದಾನ ಮಾಡಿ ಸೊಸೆಯ ಜೀವ ಉಳಿಸಿದ ಅತ್ತೆ

mumbai woman
Published on

ಮುಂಬೈ: 70 ವರ್ಷದ ಮಹಿಳೆ ಮೂತ್ರಪಿಂಡ ವೈಫಲ್ಯದಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ತನ್ನ 43 ವರ್ಷದ ಸೊಸೆಗೆ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಸೊಸೆಗೆ ಜೀವದಾನ ಮಾಡಿದ್ದಾರೆ.

70 ವರ್ಷದ ಪ್ರಭಾ ಮೋಟಾ ತನ್ನ 43 ವರ್ಷದ ಸೊಸೆ ಅಮಿಷಾಗೆ ಕಿಡ್ನಿ ದಾನ ಮಾಡಿ ಆಕೆಯ ಜೀವ ಉಳಿಸಿದ್ದಾರೆ. ಆಗಸ್ಟ್ 1 ರಂದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕಳೆದ ವರ್ಷ ಅಮಿಷಾಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವುದು ಪತ್ತೆಯಾದ ನಂತರ ಅಮೀಷಾ ಅವರ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿದ್ದವು.

ಮೂತ್ರಪಿಂಡ ಕಸಿ ಮಾಡಲು ನೆಫ್ರಾಲಜಿ ವಿಭಾಗದ ನಿರ್ದೇಶಕ ಡಾ.ಜತಿನ್ ಕೊಠಾರಿ ಅವರಿಗೆ ಸಲಹೆ ನೀಡಿದರು. ಕಸಿ ಮಾಡದಿದ್ದರೆ, ಡಯಾಲಿಸಿಸ್ ಮಾಡಬೇಕಾಗುತ್ತದೆ. ಇದು ಅಂತಿಮವಾಗಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದರು.

ಅತ್ತೆ ಪ್ರಭಾ ತನ್ನ ಸೊಸೆಗೆ ಕಿಡ್ನಿ ದಾನ ಮಾಡಲು ಮುಂದಾದರು. ಎಲ್ಲಾ ವೈದ್ಯಕೀಯ ಪರೀಕ್ಷೆಗಳ ನಂತರ,  ಆಗಸ್ಟ್ 1 ರಂದು ಕಸಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿತು. ದಾನಿ ಮತ್ತು ರೋಗಿಯಾದ ಅತ್ತೆ- ಸೊಸೆ ಆರೋಗ್ಯ ಸ್ಥಿರವಾಗಿದ್ದು, ಅವರು ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ. ಅತ್ತೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net