

ಡೊಮಿನಿಕಾ: ಪ್ರವಾಸಿ ಭಾರತ ತಂಡದ ವಿರುದ್ಧ ಬುಧವಾರದಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ 13 ಆಟಗಾರರ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ದೈತ್ಯದೇಹಿ ಸ್ಪಿನ್ನರ್ ರಹಕೀಮ್ ಕಾರ್ನ್ವಾಲ್ ಮತ್ತು ಎಡಗೈ ಸ್ಪಿನ್ನರ್ ಜೋಮೆಲ್ ವಾರಿಕಾನ್ ತಂಡಕ್ಕೆ ಮರಳಿದ್ದರೆ, ಎಡಗೈ ಬ್ಯಾಟರ್ ಕಿರ್ಕ್ ಮೆಕೆಂಜಿ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಈ ಮುನ್ನ ದಣ ಆಫ್ರಿಕಾ ಪ್ರವಾಸದ ವೇಳೆ ತಂಡದಲ್ಲಿದ್ದ ಮತ್ತು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡದಿರುವ ಎಡಗೈ ಬ್ಯಾಟರ್ ಅಲಿಕ್ ಅಥಾನಾಜೆ ಸ್ಥಾನ ಉಳಿಸಿಕೊಂಡಿದ್ದಾರೆ.
ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ ಪುತ್ರ ತೇಜ್ನಾರಾಯಣ್ ಚಂದ್ರಪಾಲ್ ಕೂಡ ತಂಡದಲ್ಲಿದ್ದಾರೆ. 27 ವರ್ಷದ ಎಡಗೈ ಬ್ಯಾಟರ್ ತೇಜ್ನಾರಾಯಣ್ ಈಗಾಗಲೆ ವಿಂಡೀಸ್ ಪರ 6 ಟೆಸ್ಟ್ ಆಡಿದ್ದಾರೆ. ಕೈಲ್ ಮೇಯರ್ಸ್ ಮತ್ತು ವೇಗಿ ಜೇಡನ್ ಸೀಲ್ಸ್ ಗಾಯದಿಂದಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಧಿಕ ದೇಹತೂಕದ ಆಟಗಾರ ಎನಿಸಿರುವ 140 ಕೆಜಿ ತೂಕ ಮತ್ತು 6.8 ಅಡಿ ಎತ್ತರದ ದೈತ್ಯದೇಹಿ ಕಾರ್ನ್ವಾಲ್ 2019ರಲ್ಲಿ ಭಾರತ ವಿರುದ್ಧವೇ ಟೆಸ್ಟ್ ಪದಾರ್ಪಣೆ ಮಾಡಿದ್ದರು.
ವಿಂಡೀಸ್ ತಂಡ: ಕ್ರೇಗ್ ಬ್ರಾಥ್ವೇಟ್ (ನಾಯಕ), ಜೆಮೈರ್ನ್ ಬ್ಲಾ$್ಯಕ್ವುಡ್, ಅಲಿಕ್ ಅಥಾನಾಜೆ, ತೇಜ್ನಾರಾಯಣ್ ಚಂದ್ರಪಾಲ್, ರಹಕೀಮ್ ಕಾರ್ನ್ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸ್ೆ, ಕಿರ್ಕ್ ಮೆಕೆಂಜಿ, ರೇಮನ್ ರೈರ್, ಕೆಮರ್ ರೋಚ್, ಜೋಮೆಲ್ ವಾರಿಕನ್.