

ನವದೆಹಲಿ: ಕೋವಿಡ್-19 ಪಾಸಿಟಿವ್ ಇರುವ ವರದಿಯನ್ನು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ತಳ್ಳಿಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿರುವ ಲಾರಾ, ಕೋವಿಡ್-19ರ ಪರೀಕ್ಷೆಗೆ ಒಳಗಾಗಿದ್ದು ನನ್ನ ವರದಿ ನೆಗೆಟಿವ್ ಬಂದಿದೆ. ಆದರೆ, ಪಾಸಿಟಿವ್ ವರದಿ ಬಂದಿದೆ ಎಂದು ತಪ್ಪು ಮಾಹಿತಿ ಹರಿದಾಡುತ್ತಿದೆ ಎಂದು ಲಾರಾ ಹೇಳಿದ್ದಾರೆ. ನನ್ನ ಕೋವಿಡ್ -19ರ ವರದಿ ಪಾಸಿಟಿವ್ ವರದಿ ಬಂದಿದೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. ಇದು ತಪ್ಪು ಮಾಹಿತಿ. ಈಗಾಗಲೇ ಕೋವಿಡ್ -19 ರಿಂದ ಎಲ್ಲೆಡೆ ಜನರು ಭಯಭೀತರಾಗಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಲಾರಾ ಮನವಿ ಮಾಡಿಕೊಂಡಿದ್ದಾರೆ.
ಇದರಿಂದ ಜನ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಎಂದು ಲಾರಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ತಪ್ಪು ಮಾಹಿತಿ, ಅನಗತ್ಯವಾಗಿ ತಪ್ಪು ಮಾಹಿತಿ ಹರಡುವುರಿಂದ ಜನರ ಮನಸು ಘಾಸಿಗೊಳಿಸಿದಂತೆ ಎಂದು ಲಾರಾ ಹೇಳಿದ್ದಾರೆ. ನನಗೆ ವೈಯಕ್ತಿಕವಾಗಿ ಸಮಸ್ಯೆಯಾಗದಿದ್ದರೂ ಸಮುದಾಯದ ದೃಷ್ಟಿಯಿಂದ ಇಂಥ ತಪ್ಪು ವರದಿಗಳು ಒಳ್ಳೆಯದಲ್ಲ. ಎಲ್ಲರಿಗೂ ಒಳ್ಳೆದಾಗಲಿ, ಆದಷ್ಟು ಬೇಗ ಈ ಮಹಾಮಾರಿ ದೂರವಾಗಲಿ ಎಂದು 51 ವರ್ಷದ ಲಾರಾ ಬರೆದುಕೊಂಡಿದ್ದಾರೆ. ಲಾರಾಗೆ ಕರೊನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಸುಳ್ಳು ವರದಿ ಪ್ರಕಟವಾದ ಬೆನ್ನಲ್ಲೇ ಕಳೆದ 24 ಗಂಟೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವೇ ಮೂಡಿತ್ತು.
ಇದನ್ನೂ ಓದಿ: ಯುಎಸ್ ಓಪನ್ಗೆ ನೇರಪ್ರವೇಶ ಪಡೆದ ಸುಮಿತ್ ನಗಾಲ್
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಲಾರಾ, ಅಂತಾರಾಷ್ಟ್ರೀಯ ಪಂದ್ಯಗಳಿಂದ 53 ಶತಕ ಒಳಗೊಂಡಂತೆ 22,358 ರನ್ ಪೇರಿಸಿದ್ದಾರೆ. 2004ರಲ್ಲಿ ಇಂಗ್ಲೆಂಡ್ ಎದುರು ಟೆಸ್ಟ್ ಕ್ರಿಕೆಟ್ನಲ್ಲಿ ಲಾರಾ 400 ರನ್ ಸಿಡಿಸಿರುವುದು ಇದುವರೆಗೂ ವೈಯಕ್ತಿಕ ವಿಶ್ವದಾಖಲೆಯಾಗಿ ಉಳಿದಿದೆ.