ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ದಿಲ್​ಜಾನ್ ಸಾವು

pub
diljaan
Published on

ಅಮೃತಸರ: ಇಂದು ಮುಂಜಾನೆ ಅಮೃತಸರ ಜಲಂದರ್ ಹೆದ್ದಾರಿಯ ಜಂಡಿಯಾಲಾ ಗುರು ಟೌನ್​ ಬಳಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ದಿಲ್​ಜಾನ್ (32) ಮೃತಪಟ್ಟಿದ್ದಾರೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲವಾದರೂ, ಪ್ರಾಥಮಿಕ ತನಿಖೆ ಪ್ರಕಾರ ಸರಕು ಸಾಗಾಣೆಯ ವಾಹನವೊಂದಕ್ಕೆ ಮಂಗಳವಾರ ನಸುಕಿನ ಜಾವ ದಿಲ್​ಜಾನ್ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತವಾದ ತಕ್ಷಣ ಸ್ಥಳೀಯರು ದಿಲ್​ಜಾನ್​​ನ್ನು ರಕ್ಷಿಸಲು ಮುಂದಾದರೂ ಸಹ ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ದಿಲ್​ಜಾನ್ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ. ಕೆನಡಾದಲ್ಲಿ ನೆಲಸಿರುವ ದಿಲ್​ಜಾನ್ ಕುಟುಂಬ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net