ಇದು ಅಂತಿಂಥ ಮದ್ವೆ ಅಲ್ಲ! ವಿವಾಹ ಆಮಂತ್ರಣದಲ್ಲೇ ಇದೆ ಭಾರಿ ವಿಶೇಷತೆ

Wedding- invitation
Published on

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ನಿಶ್ಚಿತಾರ್ಥ, ಮದುವೆ ಮುಂತಾದ ಶುಭ ಸಮಾರಂಭಗಳನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುವ ಪರಿಪಾಠ ಆರಂಭವಾಗಿದೆ. ಆಮಂತ್ರಣ ಪತ್ರಿಕೆಯೂ ವೈವಿಧ್ಯಮಯವಾಗಿರುತ್ತೆ. ಈ ಸಾಲಿನಲ್ಲಿ ಇಲ್ಲೊಂದು ಮದುವೆ ಆಹ್ವಾನ ಪತ್ರಿಕೆ ವಿಭಿನ್ನವಾಗಿದೆ.

ಶಿವಮೊಗ್ಗದ ಪ್ರಸಿದ್ಧ ವರ್ತಕ, ನಾಣ್ಯ ಸಂಗ್ರಾಹಕರೂ ಆದ ಎಚ್​.ವಿ.ಪಂಚಾಕ್ಷರಪ್ಪ ಅವರು ತಮ್ಮ ಪುತ್ರಿ ಶಿವಾಲಿ ವಿವಾಹಕ್ಕೆ ಆಮಂತ್ರಣ ಪತ್ರಿಕೆಯೊಂದಿಗೆ 676 ಲೇಖನಗಳುಳ್ಳ 'ವಿವಾಹ ಸಂಗಮ' ಎಂಬ ಹೊತ್ತಗೆ ಮುದ್ರಿಸಿ ಹಂಚುತ್ತಿದ್ದಾರೆ.

ವಿವಾಹ ಸಂಗಮದಲ್ಲಿನ ಎಲ್ಲ ಲೇಖನಗಳು, ಕವನಗಳನ್ನು ಎಚ್​.ವಿ.ಪಂಚಾಕ್ಷರಪ್ಪ ಅವರೇ ಬರೆದಿರುವುದು ವಿಶೇಷ. ವಿವಾಹಕ್ಕೆ ಬರುವ ಅತಿಥಿಗಳಿಗೆ ವಿವಾಹ ಸಂಗಮ ಹೊತ್ತಗೆ ನೀಡಲು ನಿರ್ಧರಿಸಿದ್ದಾರೆ. ತಮ್ಮ ಮನೆಯ ಗೃಹಪ್ರವೇಶ ಸಂದರ್ಭದಲ್ಲಿ 500 ಪುಟಗಳ ಹೊತ್ತಗೆ ಪ್ರಕಟಿಸುವ ಮೂಲಕ ಇವರು ಗಮನ ಸೆಳೆದಿದ್ದರು.

ವಿಭಿನ್ನ ಪದ್ಧತಿಯ ವಿವಾಹಗಳು, ನಮ್ಮ ಸಂಸ್ಕೃತಿಯಲ್ಲಿ ವಿವಾಹದ ಪ್ರಾಮುಖ್ಯತೆ, ಸಪ್ತಪದಿ, ಸೀಮಂತ ಮುಂತಾದ ಷೋಡಶ ಸಂಸ್ಕಾರಗಳ ಬಗ್ಗೆ ವಿವಾಹ ಸಂಗಮದಲ್ಲಿ ವಿವರಣೆಗಳಿವೆ. ನ.19 ರಂದು ಪಂಚಾಕ್ಷರಪ್ಪ ಅವರ ಪುತ್ರಿ ಶಿವಾಲಿ ಮತ್ತು ಧರಣೇಶ್​ ಹಸೆಮಣೆ ಏರಲಿದ್ದಾರೆ. ಇವರ ಮದುವೆ ಆಹ್ವಾನ ಪತ್ರಿಕೆಯ ಕೆಲ ಪುಟಗಳ ಫೋಟೋ ಪ್ರತಿ ಇಲ್ಲಿದೆ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net