ಕ್ವಾರಂಟೈನಲ್ಲಿದ್ದ ಲಾಡ್ಜ್​ನಲ್ಲೇ ಆ್ಯನಿವರ್ಸರಿ ಸೆಲೆಬ್ರೇಷನ್.. ಆ ನ್ವಾಲ್ವರ ವಿರುದ್ಧ ಕೇಸ್​!

party
Published on

ಶಿವಮೊಗ್ಗ: ಮುಂಬೈನ ಥಾಣೆಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ದಂಪತಿ ಲಾಡ್ಜ್‌ನಲ್ಲೇ ಸಂಬಂಧಿಕರ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದು, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಂಬಂಧ ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಉಂಬ್ಳೆಬೈಲ್ ಸಮೀಪದ ಕಣಗಲಸರ ಗ್ರಾಮದ ವಿಜಯಕುಮಾರ್ ಮತ್ತು ಜ್ಯೋತಿಗೌಡ ದಂಪತಿ ಇತ್ತೀಚೆಗೆ ಮುಂಬೈನಿಂದ ಬಂದಿದ್ದರು. ಹಾಗಾಗಿ ದಂಪತಿಯನ್ನು ನಗರದ ದುರ್ಗಾ ಲಾಡ್ಜ್‌ನಲ್ಲಿ 14 ದಿನ ಕ್ವಾರಂಟೈನ್‌ಗೆ ಇರಿಸಲಾಗಿತ್ತು. ಈ ವೇಳೆ ವಿಜಯಕುಮಾರ್ ತನ್ನ ಸಹೋದರನ ದಂಪತಿಯನ್ನು ಲಾಡ್ಜ್‌ಗೆ ಕರೆಸಿಕೊಂಡು ಅವರ 3ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಬಳಿಕ 14 ದಿನದ ಕ್ವಾರಂಟೈನ್ ಮುಗಿಸಿ ಯಾರಿಗೂ ಹೇಳದೇ ಕೇಳದೆ ಲಾಡ್ಜ್‌ನಿಂದ ಮನೆಗೆ ತೆರಳಿದ್ದರು.

ಲಾಡ್ಜ್‌ನಲ್ಲಿ ಆಚರಿಸಿಕೊಂಡ ವಿವಾಹ ವಾರ್ಷಿಕೋತ್ಸವದ ಫೋಟೋಗಳನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಕೆಲವರು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರಿಗೆ ಫೋಟೋ ಸಮೇತ ದೂರು ನೀಡಿದ್ದರು. ಎಚ್ಚೆತ್ತ ಜಿಲ್ಲಾಡಳಿತ ತಕ್ಷಣವೇ ನಾಲ್ವರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದೆ. ಈ ಬಗ್ಗೆ ಪಾಲಿಕೆ ಮುಖ್ಯ ಆರೋಗ್ಯ ಅಧಿಕಾರಿ ಠಾಣೆಗೆ ತೆರೆಳಿ ವಿಜಯಕುಮಾರ್-ಜ್ಯೋತಿ ಗೌಡ ಹಾಗೂ ಮತ್ತಿಬ್ಬರ ವಿರುದ್ಧ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net