ಕಾಲೇಜು ಹುಡುಗಿಯನ್ನು ಚುಡಾಯಿಸಿದ ಯುವಕರು: ರಸ್ತೆ ಮಧ್ಯದಲ್ಲೇ ರೋಡ್ ರೋಮಿಯೋಗಳಿಗೆ ಖಾಕಿ ಏಟು; ವಿಡಿಯೋ ವೈರಲ್! Eve Teasing Viral Video
ರಸ್ತೆ ಮಧ್ಯದಲ್ಲೇ ಪೋಕರಿಗಳನ್ನು ಬರಿಗಾಲಿನಲ್ಲಿ ಕೂರಿಸಿ ಬೆಂಡೆತ್ತಿದ ಪೊಲೀಸ್!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾಲೇಜು ಹುಡುಗಿಯನ್ನು ಚುಡಾಯಿಸಿದ ರೋಡ್ ರೋಮಿಯೋಗಳು
ರಸ್ತೆ ಮಧ್ಯದಲ್ಲೇ ಪೋಕರಿಗಳನ್ನು ಬರಿಗಾಲಿನಲ್ಲಿ ಕೂರಿಸಿ ಬೆಂಡೆತ್ತಿದ ಪೊಲೀಸ್!
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುಚ ರೋಡ್ ರೋಮಿಯೋಗಳ ಹಾವಳಿ ಮಿತಿ ಮೀರುತ್ತಿದೆ. ಇದೇ ಕಾರಣಕ್ಕೆ ಮನೆಯ ಹೆಣ್ಣು ಮಕ್ಕಳು ಆಚೆ ಹೋಗುವಾಗ ಒಬ್ಬಳೇ ಹೋಗಬೇಡ, ಜೊತೆಗೆ ಅಣ್ಣನನ್ನೋ, ತಂದೆಯನ್ನೋ ಕರೆದೊಯ್ಯಿ ಎಂದು ಮನೆಯವರು ಗದರುತ್ತಾರೆ.
ಈ ರೋಡ್ ರೋಮಿಯೋಗಳು ಬಸ್ ನಿಲ್ದಾಣ, ಕಾಲೇಜ್ ಆವರಣ, ಮಾರ್ಕೆಟ್ಗಳಲ್ಲಿ ಗುಂಪು ಕಟ್ಟಿಕೊಂಡು ಹುಡುಗಿಯರಿಗೆ ಮತ್ತು ಯುವತಿಯರಿಗೆ ಚುಡಾಯಿಸುತ್ತಾ ಕಾಲ ಕಳೆಯುತ್ತಾರೆ. ಈ ಪೋಕರಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಅದೆಷ್ಟೋ ಹೆಣ್ಣು ಮಕ್ಕಳು ಮನಸ್ಸಿನಲ್ಲೇ ಶಾಪ ಹಾಕಿರುತ್ತಾರೆ.
ಆದರೆ ಕೆಲ ದಿನಗಳ ಹಿಂದೆ ಹುಡಿಯೊಬ್ಬಳಿಗೆ ಚುಡಾಯಿಸಿದ ಯುವಕರನ್ನು ಪೊಲೀಸರು ರಸ್ತೆ ಮಧ್ಯದಲ್ಲಿ ಬೆಂಡೆತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Eve Teasing Viral Video) ಆಗುತ್ತಿದ್ದು, ನೆಟ್ಟಿಗರು ಪೊಲೀಸರ ಕೆಲಸಕ್ಕೆ ಭೇಷ್ ಎಂದಿದ್ದಾರೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ವಿಶಾಖಪಟ್ಟಣಂನಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಕಾಲೇಜಿಗೆ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಮೂರು ಜನ ಯುವಕರು ಚುಡಾಯಿಸಿದ್ದಾರೆ. ಆಗ ಸ್ಥಳದಲ್ಲೇ ಇದ್ದ ಪೊಲೀಸರು ಆ್ಯಕ್ಷನ್ ಮೊಡ್ಗೆ ಬಂದಿದ್ದಾರೆ.
ಮೂರು ಯುವಕರನ್ನು ಬರಿಗಾಲಿನಲ್ಲಿ ರಸ್ತೆ ಮಧ್ಯೆ ಕುಳಿಸಿ ಕಾಲಿಗೆ ಲಾಠಿಯಿಂದ ಸರಿಯಾಗಿ ಬೆಂಡೆತ್ತಿದ್ದಾರೆ. ಹಾಗು ಈ ಟ್ರಿಟ್ಮೆಂಟ್ನ್ನು ಸಾರ್ವಜನಿಕರ ಎದುರೇ ನೀಡಿರುವುದು, ಪೊಲೀಸ್ ಇಲಾಖೆ ಮೇಲೆ ಜನರಿಗೆ ನಂಬಿಕೆ, ಭರವಸೆ ಮೂಡಿಸುವ ಕೆಲಸ ಮಾಡಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್ ಆಕ್ಟಿವ್ ಆಗಿದ್ದಾರೆ. ಇಂತಹ ರೋಡ್ ರೋಮಿಯೋಗಳಿಗೆ ಹೀಗೆ ಧರ್ಮದೇಟು ಬಿದ್ದರೆ ಮಾತ್ರ ಇವರು ಸರಿಯಾಗುವುದು ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಖಾಕಿ ಏಟನ್ನು ತಿಂದ ಮೇಲಾದರೂ ಇವರು ಸುಧಾರಿಸುವಂತಾಗಲಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಪೊಲೀಸರೆ ಹೀಗೆ ನೇರವಾಗಿ ಶಿಕ್ಷೆ ನೀಡಿದರೆ, ದೇಶದಲ್ಲಿ ನ್ಯಾಯಾಲಯ ಇರುವುದು ಏಕೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ, (ಏಜನ್ಸೀಸ್).