ಮುದ್ದಾಡಲು ಹೋದಾಗ ಅಟ್ಯಾಕ್ ಮಾಡಿದ ಟೈಗರ್ ಕಿಡ್: ಯುವಕನ ಕಪಾಳಮೋಕ್ಷಕ್ಕೆ ತಬ್ಬಿಬ್ಬಾದ ವ್ಯಾರ್ಘ ಪುತ್ರ; ವಿಡಿಯೋ ವೈರಲ್! Youth Slaps Tiger Cub
ಕಚ್ಚಲು ಬಂದ ಹುಲಿ ಮರಿಗೆ ಯುವಕ ಕಪಾಳಮೋಕ್ಷ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಕ್ಕಿನ ತರಹ ಹುಲಿ ಮರಿಯನ್ನು ಮುದ್ದಾಡಲು ಹೋದ ಯುವಕ
ದಿಡೀರ್ ದಾಳಿ ಮಾಡಿದ ವ್ಯಾರ್ಘ ಪುತ್ರ
ಕಚ್ಚಲು ಬಂದ ಹುಲಿ ಮರಿಗೆ ಯುವಕ ಕಪಾಳಮೋಕ್ಷ
ವೈರಲ್: ಹುಲಿ ಅಥವಾ ಸಿಂಹಗಳು ನೋಡಲು ಕ್ರೂರವಾಗಿ, ಭಯಂಕರವಾಗಿ ಕಾಣಿಸುತ್ತವೆ. ಆದರೆ ಅವುಗಳ ಮರಿಗಳು ಬಹಳ ಮುದ್ದಾಗಿದ್ದು, ನೋಡಲು ಬೆಕ್ಕಿನ ಮರಿಗಳಂತೆ ಕಾಣುತ್ತವೆ.
ಹೀಗಾಗಿ ಇವುಗಳನ್ನು ನೋಡಬೇಕು, ಮುಟ್ಟಬೇಕೆಂದು ಅನಿಸುವುದು ಸಹಜ. ಆದರೆ ಇವು ಮರಿಗಳಾದರೂ ಕಾಡು ಪ್ರಾಣಿಗಳು ಎನ್ನುವ ಸಂಗತಿಯನ್ನು ಮರೆಯಬಾರದು. ಇತ್ತೀಚೆಗೆ ಹುಲಿ ಮರಿಯ ಕೋಪಕ್ಕೆ ಗುರಿಯಾದ ಯುವಕನ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Youth Slaps Tiger Cub) ಆಗುತ್ತಿದೆ.
ಸಾಮಾನ್ಯವಾಗಿ ಪ್ರಾಣಿ ಪ್ರೇಮಿಗಳು ಮೃಗಾಲಯಕ್ಕೆ ಹೋದಾಗ ಅಲ್ಲಿನ ಪ್ರಾಣಿಗಳ ಜೊತೆ ಆಟವಾಡಲು ಇಷ್ಟಪಡುತ್ತಾರೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕನೊಬ್ಬ ಹುಲಿ ಮರಿಗಳನ್ನು ಇಟ್ಟಿರುವ ಪಂಜರದೊಳಗೆ ಪ್ರವೇಶಿಸಿದ್ದಾನೆ.
ಅಲ್ಲಿ ಆರಾಮವಾಗಿ ಕುಳಿತಿದ್ದ ಪುಟಾಣಿ ಹುಲಿ ಮರಿಯನ್ನು ನೋಡಿ ಆಕರ್ಷಿತನಾಗಿದ್ದಾನೆ. ಅದು ತನ್ನ ಮನೆಯಲ್ಲಿರುವ ಸಾಕುಬೆಕ್ಕಿನಂತೆ ಕಂಡಿದ್ದೇ ತಡ, ಅದರ ಹತ್ತಿರ ಹೋಗಿ ಕುತ್ತಿಗೆ ಸವರುತ್ತಾ ಮುದ್ದಾಡಲು ಶುರು ಮಾಡಿದ್ದಾನೆ. ಆದರೆ, ಆತನ ಈ ಅತಿಯಾದ ಪ್ರೀತಿ ಆ ಕಾಡಿನ ರಾಜನಿಗೆ ಇಷ್ಟವಾಗಲಿಲ್ಲ.
ಕ್ಷಣಾರ್ಧದಲ್ಲಿ ಅಟ್ಯಾಕ್ ಮಾಡಿದ ಟೈಗರ್!
ಯುವಕ ಕುತ್ತಿಗೆ ಸವರುತ್ತಿದ್ದಂತೆ ಅಲರ್ಟ್ ಆದ ಹುಲಿ ಮರಿ, ತನ್ನ ಅಸಲಿ ಸ್ವಭಾವವನ್ನು ತೋರಿಸಿದೆ. ಕ್ಷಣಾರ್ಧದಲ್ಲಿ ಆತನ ಕೈಯ ಮೇಲೆಯೇ ಘರ್ಜಿಸುತ್ತಾ ದಾಳಿ ಮಾಡಿದೆ. ಹರಿತವಾದ ಹಲ್ಲುಗಳಿಂದ ಆತನ ಕೈಯನ್ನು ಕಚ್ಚಲು ಮುಂದಾಗಿದೆ.
ಹುಲಿ ಮರಿಯ ಈ ದಿಢೀರ್ ಆಕ್ರಮಣದಿಂದ ಯುವಕ ಸಂಪೂರ್ಣವಾಗಿ ಬೆಚ್ಚಿಬಿದ್ದಿದ್ದಾನೆ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ, ತನ್ನ ಕೈಯನ್ನು ಬಲವಾಗಿ ಎಳೆದುಕೊಂಡು ಹುಲಿ ಮರಿಯ ಮುಖಕ್ಕೇ ಒಂದು ಕಪಾಳಮೋಕ್ಷ ಮಾಡಿದ್ದಾನೆ.
ಕೈಯಲ್ಲಿದ್ದ ಮನುಷ್ಯ ಸಡನ್ ಆಗಿ ಮುಖಕ್ಕೆ ಹೊಡೆಯುತ್ತಿದ್ದಂತೆ ಶಾಕ್ ಆದ ಹುಲಿ ಮರಿ, ಹೆದರಿ ಅಲ್ಲಿಂದ ಸದ್ದಿಲ್ಲದೆ ಓಡಿಹೋಗಿದೆ. ಅದೃಷ್ಟವಶಾತ್ ಯುವಕ ಯಾವುದೇ ದೊಡ್ಡ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನೆಟ್ಟಿಗರು ಫುಲ್ ಫಿದಾ: ಕಾಮೆಂಟ್‌ಗಳ ಸುರಿಮಳೆ!
ಹುಲಿ ಮರಿ ಆ್ಯಕ್ಷನ್ಗೆ ಯುವಕನ ರಿಯಾಕ್ಷನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಸ್ಯಭರಿತ ಕಮೆಂಟ್ ಮಾಡಲು ಶುರುವಿಟ್ಟಿದ್ದಾರೆ.
ಈ ಘಟನೆ ನಂತರ ಈ ವ್ಯಕ್ತಿ ತನ್ನ ಜೀವನದಲ್ಲಿ ಮತ್ತೆಂದೂ ಹುಲಿ ಮರಿಯನ್ನು ಮುಟ್ಟುವ ಸಾಹಸ ಮಾಡಲ್ಲ! ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಹೀಗೆ ಪ್ರಾಣಿಗೆ ಹೊಡೆಯುವುದು ಎಷ್ಟು ಸರಿ? ಪ್ರಾಣಿ ದಯಾ ಸಂಘದವರು ಈ ಯುವಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. ಅಣ್ಣಾ ಅದು ನಿಮ್ಮ ಮನೆ ಬೆಕ್ಕಲ್ಲ, ಹುಲಿ ಮರಿ.. ಆದರೂ ನಿನ್ನ ರಿಯಾಕ್ಷನ್ ಮಾತ್ರ ಬೆಂಕಿ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).