ಕಾರಿಗೆ ಸಣ್ಣ ಸ್ಕ್ರ್ಯಾಚ್​... ಪೊಲೀಸ್ ಪೇದೆಯನ್ನು ಕಾರಿನಿಂದ ಎಳೆದು ನಡುರಸ್ತೆಯಲ್ಲಿ ಥಳಿಸಿದ ಯುವಕರು; 14 ಮಂದಿ ಬಂಧನ! Nagpur Police Attacked

ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ನಡುರಸ್ತೆಯಲ್ಲಿ ಗ್ಯಾಂಗ್ ಅಟ್ಯಾಕ್
ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ನಡುರಸ್ತೆಯಲ್ಲಿ ಗ್ಯಾಂಗ್ ಅಟ್ಯಾಕ್
Published on

ಪ್ರಮುಖ ಮುಖ್ಯಾಂಶಗಳು

  • ಖಾಕಿ ಮೇಲೆ ಪುಂಡರ ಅಟ್ಟಹಾಸ!
  • ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ನಡುರಸ್ತೆಯಲ್ಲಿ ಗ್ಯಾಂಗ್ ಅಟ್ಯಾಕ್
  • ಸಿಸಿಟಿವಿ ಆಧರಿಸಿ 14 ಜನರನ್ನು ಬಂಧಿಸಿದ ನಾಗ್ಪುರ ಪೊಲೀಸರು
ನಾಗ್ಪುರ​​: ಕ್ಷುಲ್ಲಕ ಕಾರಣಕ್ಕೆ ಪೊಲೀಸ್​ ಪೇದೆಯೊಬನನ್ನು ವಾಹನದಿಂದ ಎಳೆದು ರಸ್ತೆಯಲ್ಲಿ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ (Nagpur Police Attacked) ದಲ್ಲಿ ವರದಿಯಾಗಿದೆ. ಈ ಘಟನೆಯು ಜೂನ್​ 28 ರಂದು ನಡೆದಿದ್ದು, ಜೀಪಿನಲ್ಲಿದ್ದ ಪೊಲೀಸ್​ನನ್ನು ಬೈಕಿನೊಂದಿಗೆ ಬಂದ ಯುವಕರು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರಣವೇನು?

ಹಲ್ಲೆಗೊಳಲಾದ 35 ವರ್ಷದ ಪೊಲೀಸ್​ ಪೇದೆ ತನ್ನ ಗೆಳತಿ ಜೊತೆ ತಮ್ಮ ಖಾಸಗಿ ಕಾರಿನಲ್ಲಿ ಮಂಕಾಪುರ ಚೌಕ್​ನತ್ತ ಸಾಗುತ್ತಿದ್ದರು. ಈ ವೇಳೆ ಅಲ್ಲಿದ್ದ ಬೈಕ್​ವೊಂದು ಕಾರಿಗೆ ಡಿಕ್ಕಿ ಹೊಡೆದು, ಸಣ್ಣ ಗಿರು ಬಿದ್ದಿದೆ. ಇದೇ ಕಾರಣಕ್ಕೆ ಕಾರಿನಲ್ಲಿದ್ದ ಪೇದೆ ಮತ್ತು ಬೈಕ್​ನಲ್ಲಿದ್ದ ಯುವಕನಿಗೆ ವಾಗ್ವಾದ ನಡೆದಿದೆ.
ನಂತರ ಹತ್ತಿರದಲ್ಲಿದ್ದ ಬೈಕರ್​ನ ಗೆಳೆಯರು ಪೇದೆಯನ್ನು ಅವನ ಕಾರಿನಿಂದ ಆಚೆಗೆಳೆದು ನಡುರಸ್ತೆಯಲ್ಲಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೂರನ್ನು ದಾಖಲಿಸಿದ ನಂತರ ಸುಮಾರು 14 ಜನರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಚಿಕಿತ್ಸೆ ಪಡೆಯುತ್ತಿರುವ ಪೇದೆ; ಮುಂದುವರಿದ ತನಿಖೆ

ಈ ಘಟನೆ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್​ ಪೇದೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್​ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಮಾಹಿತಿ ಪಡೆದು, ಧೈರ್ಯ ನೀಡಿದ್ದಾರೆಂದು ತಿಳಿದು ಬಂದಿದೆ.
ಇನ್ನೊಂದು ಕಡೆ ಪೊಲೀಸರು ಸುಮಾರು 14 ಜನರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಹರ್ಷ್ ಪವಾರ್, ಗೌರವ್ ಧಿರ್ಡೆ, ಸಂಯಮ್ ಗಣೇಶಪುರಿ, ಯಾಸ್ ಪ್ರತೀಕಿ, ಸತ್ಯಂ ಶಿರ್ಕೆ, ಪ್ರೇಮ್‌ರಾಜ್ ಢಕಾಟೆ, ಆಕಾಶ್ ಬೊಕಡೆ, ನಿತಿನ್ ಗೋಖಲೆ, ವಿಕ್ಕಿ ತೇಲ್ಘರೆ, ಸಾಗರ್ ಬೊಕ್ಡೆ, ಗಣೇಶ್ ಉಯಿಕೆ, ಪ್ರೀತಮ್ ಮೋಡೆಕರ್ ಮತ್ತು ಟಿಕಾರಾಂ ಬಾರಾಪತ್ರೆ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಸುಮಾರು 5.6 ಲಕ್ಷ ಮೌಲ್ಯದ ಐದು ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net