ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕುಟುಂಬದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಚಿತ್ರದ ಶೀರ್ಷಿಕೆ ಈಥ ಎಂದು ಇಟ್ಟಿರುವುದಕ್ಕೆ ನಮ್ಮ ಕುಟುಂಬದ ಯಾವುದೇ ಆಕ್ಷೇಪವಿಲ್ಲ. ವಿಠಾಬಾಯಿ ಅವರನ್ನು ಅವರ ಆಪ್ತ ವಲಯದಲ್ಲಿ ಪ್ರೀತಿಯಿಂದ 'ಈಥ' ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ ಚಿತ್ರತಂಡ ಆ ಹೆಸರನ್ನೇ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ ಯಾವುದೇ ಅಪಪ್ರಚಾರ ಅಥವಾ ಅಪಮಾನದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.