ಕ್ರಿಕೆಟ್ ಬ್ಯಾಟ್ ಬಿಟ್ಟು ಪೆನ್ ಹಿಡಿದ ಸಂಜು ಸ್ಯಾಮ್ಸನ್! ವರುಣ್ ಚಕ್ರವರ್ತಿ ಎದುರು ಜಿದ್ದಾಜಿದ್ದಿನ ಪೆನ್ ಫೈಟ್.. Varun Chakravarthy

Varun Chakravarthy (ಚಿತ್ರ X)
Varun Chakravarthy (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ಪ್ರವಾಸದ ಬಸ್ ಪ್ರಯಾಣದಲ್ಲಿ ಶಾಲಾ ದಿನಗಳ ಆಟ ನೆನಪಿಸಿದ ಸಂಜು-ವರುಣ್
  • ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದೆ
  • ಈ ಸುದೀರ್ಘ ಪ್ರಯಾಣದ ವೇಳೆ ಸಂಜು ಮತ್ತು ವರುಣ್​ ಪೆನ್​ಫೈಟ್​ ಆಟವನ್ನು ಆಡುತ್ತಿರುವ ವಿಡಿಯೋ
Varun Chakravarthy: ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ವರುಣ್ ಚಕ್ರವರ್ತಿ ಮೈದಾನದಲ್ಲಿ ಎದುರಾಳಿ ಬ್ಯಾಟರ್ ಹಾಗೂ ಬೌಲರ್‌ಗಳಿಗೆ ಬೆವರಿಳಿಸುವುದನ್ನು ನಾವು ನೋಡಿದ್ದೇವೆ. ಆದರೆ, ಇದೀಗ ಅವರಿಬ್ಬರು ತಮ್ಮ ಹಳೆಯ ಶಾಲಾ ದಿನಗಳ ನೆನಪುಗಳನ್ನು ಮರುಕಳಿಸುವಂತಹ ಆಟವೊಂದನ್ನು ಆಡುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಹಳೆಯ ನೆನಪುಗಳ ಹಾದಿಗೆ ಕರೆದೊಯ್ದಿದ್ದಾರೆ.
ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಸರಣಿಯ ಭಾಗವಾಗಿ ಟೀಮ್ ಇಂಡಿಯಾ ಆಟಗಾರರು ಡರ್ಹಾಮ್‌ನಿಂದ ಮ್ಯಾಂಚೆಸ್ಟರ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸುದೀರ್ಘ ಪ್ರಯಾಣದ ವೇಳೆ ಸಂಜು ಮತ್ತು ವರುಣ್​ ಪೆನ್​ಫೈಟ್​ ಆಟವನ್ನು ಆಡುತ್ತಿರುವ ವಿಡಿಯೋವೊಂದನ್ನು ಬಿಸಿಸಿಐ ತನ್ನ ಅಧೀಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಇಂಟರ್ನೆಟ್​ನಲ್ಲಿ ಭಾರೀ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲೇನಿದೆ?

ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡ ವೀಡಿಯೊದಲ್ಲಿ, ವರುಣ್ ಎದುರು ಸಂಜು ಸ್ಯಾಮ್ಸನ್ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ಇವರಿಬ್ಬರು ಪೆನ್ ಫೈಟ್ ಆಡುತ್ತಾ ಬಾಲ್ಯದ ನೆನಪುಗಳನ್ನು ಮರಕಳಿಸುತ್ತಾ ಆ ಆಟದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ತಿಳಿದಿಲ್ಲದವರಿಗೆ, ಪೆನ್ ಫೈಟ್ ಒಂದು ಅತ್ಯಂತ ಸರಳ ಹಾಗೂ ರೋಮಾಂಚಕ ಟೇಬಲ್‌ಟಾಪ್ (Table-top) ಆಟವಾಗಿದ್ದು, ದಶಕಗಳಿಂದ ಶಾಲಾ ವಿದ್ಯಾರ್ಥಿಗಳಲ್ಲಿ ಭಾರಿ ಜನಪ್ರಿಯವಾಗಿದೆ. ಪ್ರತಿಯೊಬ್ಬ ಆಟಗಾರನು ತನ್ನ ಪೆನ್ನನ್ನು ಮೇಜಿನ ಮೇಲ್ಮೈಯಲ್ಲಿ ಇರಿಸುತ್ತಾನೆ. ಎದುರಾಳಿಯ ಪೆನ್ನನ್ನು ಗುರಿಯಾಗಿಸಿಕೊಂಡು, ತನ್ನ ಬೆರಳಿನಿಂದ ಪೆನ್ನನ್ನು ಜೋರಾಗಿ 'ಫ್ಲಿಕ್' ಮಾಡಬೇಕಾಗುತ್ತದೆ. ಎದುರಾಳಿಯ ಪೆನ್ನಿಗೆ ಬಲವಾಗಿ ಹೊಡೆದು, ಅದನ್ನು ಮೇಜಿನಿಂದ ಕೆಳಗೆ ಬೀಳಿಸುವುದು ಅಥವಾ ನಿಗದಿಪಡಿಸಿದ ಗೆರೆಯಿಂದ ಹೊರಗೆ ತಳ್ಳುವುದು ಈ ಆಟದ ಮುಖ್ಯ ಗುರಿಯಾಗಿದೆ. ಯಾರ ಪೆನ್ ಕೊನೆಯವರೆಗೂ ಮೇಜಿನ ಮೇಲೆ ಉಳಿಯುತ್ತದೆಯೋ ಅವರೇ ವಿಜಯಶಾಲಿ!
ಸಂಜು ಮತ್ತು ವರುಣ್ ಚಕ್ರವರ್ತಿ ಇಬ್ಬರೂ ಡರ್ಹ್ಯಾಮ್‌ನಲ್ಲಿ ನಡೆದ ಭಾರತದ ಮೊದಲ T20I ಪಂದ್ಯದಲ್ಲಿ ಆಡಿದರು. ಈ ಪಂದ್ಯದ ನಂತರ ವರುಣ್ ಬೌಲಿಂಗ್ ಮಾಡಲಿಲ್ಲ, ಆದರೆ ಸ್ಯಾಮ್ಸನ್ 7 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಮರೆಯಲಾಗದ ಪ್ರದರ್ಶನ ನೀಡಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net