ಮದುವೆ ಗಿಫ್ಟ್ ನೋಡಿ ಶಾಕ್ ಆದ ವಧು-ವರ: ಸ್ಟೇಜ್ ಮೇಲೆ 'ಹಂದಿ ಮರಿ' ತಂದಿಟ್ಟ ಗೆಳೆಯ; ವಿಡಿಯೋ ವೈರಲ್! Viral Video

ಮದುವೆ ವೇದಿಕೆಯಲ್ಲಿ ವಧುವಿಗೆ ಹಂದಿ ಮರಿಯನ್ನು ಉಡುಗೊರೆಯಾಗಿ ನೀಡಿದ ಗೆಳೆಯ
ಮದುವೆ ವೇದಿಕೆಯಲ್ಲಿ ವಧುವಿಗೆ ಹಂದಿ ಮರಿಯನ್ನು ಉಡುಗೊರೆಯಾಗಿ ನೀಡಿದ ಗೆಳೆಯ
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ವೇದಿಕೆಯಲ್ಲಿ ವಧುವಿಗೆ ಹಂದಿ ಮರಿಯನ್ನು ಉಡುಗೊರೆಯಾಗಿ ನೀಡಿದ ಗೆಳೆಯ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ವೈರಲ್​: ಭಾರತದಲ್ಲಿ ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿಗಷ್ಟೇ ಸೀಮಿತವಾಗಿರುವ ಆಚರಣೆಯಲ್ಲ. ಇಲ್ಲಿ ಎರಡು ಕುಟುಂಬ, ಪರಿವಾರಗಳ ಮಿಲನ ಎಂತಲೂ ಕರೆಯಬಹುದಾಗಿದೆ. ಅದರಲ್ಲೂ ಏಪ್ರಿಲ್​, ಮೇ ತಿಂಗಳುಗಳಲ್ಲಿ ಮದುವೆಗಳ ಸಂಖ್ಯೆ ದುಪ್ಪಟ್ಟಾಗುತ್ತದೆ.
ಭಾರತೀಯ ಮದುವೆಗಳಲ್ಲಿ ಉಡುಗೊರೆಗಳಿಗೆ ವಿಶೇಷ ಪ್ರಾದಾನ್ಯತೆ ಇರುತ್ತದೆ. ಆರ್ಶೀವಾದವೇ ಉಡುಗೊರೆ ಎಂದು ಪತ್ರಿಕೆ ಮೇಲೆ ಬರೆಸಿದ್ದರೂ ಉಡುಗೊರೆ ನೀಡದೇ ಹೋದರೆ ಹೇಗೆ ಎಂದು ಜನ ಉಡುಗೊರೆ ತರುವುದನ್ನು ಮರೆಯುವುದಿಲ್ಲ.
ಸಾಮಾನ್ಯವಾಗಿ ಮದುವೆಗೆ ಉಡುಗೊರೆ ರೂಪದಲ್ಲಿ ಹಣ, ಬಟ್ಟೆ, ಒಡವೆ, ವಾಹನಗಳನ್ನು ನೀಡುವುದನ್ನು ನೋಡಿರುತ್ತೇವೆ. ಆದರೆ ಈಗ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ (Viral Video) ​ ಆಗಿರುವ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಹಂದಿ ಮರಿಯನ್ನು ಉಡುಗೊರೆ ರೂಪದಲ್ಲಿ ತಂದಿದ್ದಾನೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ವ್ಯಕ್ತಿಯೊಬ್ಬ ಮದುವೆ ವೇದಿಕೆ ಏರುತ್ತಾನೆ. ಆದರೆ ಅವನ ಕೈಯಲ್ಲಿ ಗಿಫ್ಟ್​ ಬಾಕ್ಸ್ ಬದಲು ಹಂದಿ ಮರಿಯೊಂದನ್ನು ಹೊತ್ತು ಹೋಗುತ್ತಾನೆ. ನಂತರ ವಧು-ವರರ ಪಕ್ಕದಲ್ಲಿ ಕುಳಿತ ಆತ, ವಧುವಿನ ಗೆಳಯನಾಗಿದ್ದು, ಆಕೆಯ ಕೈಗೆ ತಾನು ತಂದಿದ್ದ ಹಂದಿ ಮರಿಯನ್ನು ಕೊಟ್ಟು ಹೋಗಿದ್ದಾನೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ತಮಗೆ ತೋಚಿದಂತೆ ಕಮೆಂಟ್​ ಮಾಡುತ್ತಿದ್ದಾರೆ.
ನಾನು ಈ ರೀತಿ ಹಂದಿಯನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ಇದೇ ಮೊದಲ ಸಲ ನೋಡುತ್ತಿದ್ದೆನೆ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ. ಆದರೂ ಇದು ಸ್ಪಲ್ಪ ಅಸಹ್ಯಕಾರಿ ಉಡುಗೊರೆ ಎಂದು ಕರೆಯಬಹುದು ಎಂದು ಇನ್ನೊಬ್ಬರು ಹೇಳಿದರೆ, ಪಾಪ ಆ ವ್ಯಕ್ತಿ ತನ್ನ ಬಳಿ ಏನಿತ್ತೋ ಅದನ್ನೇ ಉಡುಗೊರೆಯಾಗಿ ನೀಡಿದಂತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net