ಪಂಜಾಬ್ನ ಪಟಿಯಾಲಾದ ಕೃಷಿ ಕುಟುಂಬದಲ್ಲಿ ಜನಿಸಿದ ಗುರಿಂದರ್‌ವೀರ್ ಸಿಂಗ್ ಬಗ್ಗೆ ಅವರ ಪ್ರಾರಂಭದ ಕೋಚ್ ಸರಬ್ಜಿತ್ ಸಿಂಗ್ ಸಂತಸ ವ್ಯಕ್ತ ಪಡಿಸಿದ್ದಾರೆ. ಅವನು ಮೊದಲಿನಿಂದಲೂ 100 ಮೀಟರ್ ಓಟದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ. 10.10 ಸೆಕೆಂಡ್ಗಳಲ್ಲಿ 100 ಮೀಟರ್ ಕ್ರಮಿಸುತ್ತೇನೆಂದು ಹೇಳುತ್ತಿದ್ದ. ಈಗ ಅದು ನನಸಾಗಿದೆ, ನನಗೆ ಅವನ ಮೇಲೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್).