ನವದೆಹಲಿ: 2030ರಲ್ಲೂ ನಾವು ಇಲ್ಲೇ ಇರುತ್ತೇವೆ. ನೀವು ಅಲ್ಲೇ ಇರುತ್ತೀರಿ..! ಸಂಸತ್ ಅಧಿವೇಶನದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಪಕ್ಷಗಳಿಗೆ ಹೀಗೆ ಟಾಂಗ್ ಕೊಟ್ಟರು. ಸದನದಲ್ಲಿ ಇಲಾಖೆ ಕಾರ್ಯ ಯೋಜನೆ ಸಾಧನೆ ಬಗ್ಗೆ ಪ್ರಸ್ತಾಪಿಸುತ್ತಿದ್ದ ವೇಳೆ ಪ್ರತಿಪಕ್ಷ ಸದಸ್ಯರ ಮಾತಿಗೆ ಹೀಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಪಿಎಸ್‌ಐ ಆತ್ಮಹತ್ಯೆ ಪರಶುರಾಮ ಪ್ರಕರಣ ಸಿಬಿಐಗೆ ವಹಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ
ನೀವು ಕಳೆದ ಹತ್ತು ವರ್ಷದಿಂದ ಹತಾಶರಾಗಿದ್ದೀರಿ. ಆದರೆ, ನಾವು ಆಶಯ ಹೊಂದಿದ್ದೇವೆ. ಈ ಐದು ವರ್ಷ ಮಾತ್ರವಲ್ಲ, 2030ರಲ್ಲೂ ನಾವು ಅಧಿಕಾರಕ್ಕೆ ಬರುತ್ತೇವೆ. ನಾವು ಮಂತ್ರಿಯಾಗಿ ಸದನಕ್ಕೆ ಮಾಹಿತಿ ಕೊಡುತ್ತಲೆ ಇರುತ್ತೇವೆ. ನೀವು ಅಲ್ಲಿ ಕೆಲ್ ಕೇಳಿಸಿಕೊಳ್ಳುತ್ತಲೇ ಇರುತ್ತೀರಿ ಎಂದು ವಿಪಕ್ಷ ಸದಸ್ಯರನ್ನು ಕುಟುಕಿದರು.
ನಮಗೆ ಹೆಮ್ಮೆಯಿದೆ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 500GW ಸಾಮರ್ಥ್ಯವನ್ನು ಸಾಧಿಸಿದ ವಿಚಾರವನ್ನು ಹಂಚಿಕೊಳ್ಳಲು ನಮಗೆ ಹೆಮ್ಮೆಯಿದೆ ಎಂದು ಹೇಳಿದರು.
ಯುಪಿಎ ಅವಧಿಯಲ್ಲಿ ಹಗರಣದ್ದೇ ಸಾಧನೆ: ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ಯೋಜನೆಗಳ ಒಟ್ಟು ಮೊತ್ತ ರೂ. 1,60,000 ಕೋಟಿ ಆಗಿದೆ. ಆದರೆ, ಯುಪಿಎ ಆಡಳಿತದ ಅವಧಿಯಲ್ಲಿ ಇಷ್ಟು ಮೊತ್ತದ ಹಗರಣಗಳೇ ನಡೆದಿವೆ ಎಂದು ಜೋಶಿ ತಿರುಗೇಟು ಕೊಟ್ಟರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತೀಯರ ಕಲ್ಯಾಣಕ್ಕಾಗಿ ಪ್ರತಿ ಯೋಜನೆಯೂ ಹೀಗೆ ಬೃಹತ್ ಮೊತ್ತದ್ದಾಗಿದೆ ಎಂದರು.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದಲ್ಲಿ ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಶೇ.165ರಷ್ಟು ಏರಿಕೆ ಕಂಡಿದೆ ಎಂದು ಸಮರ್ಥಿಸಿಕೊಂಡರು.
2014ರಲ್ಲಿ ಕೇವಲ 76.38 GW ಉತ್ಪಾದನಾ ಸಾಮರ್ಥ್ಯ ಇತ್ತು. ಕಳೆದ 10 ವರ್ಷಗಳಲ್ಲಿ ಶೇ.165 ರಷ್ಟು ವೃದ್ಧಿಸಿದ್ದು, ಪ್ರಸ್ತುತ 2003.1 GW ತಲುಪಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.
ವಯನಾಡು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ತರಗತಿಗಳ ಆರಂಭ: ಸಚಿವ ಶಿವನ್ಕುಟ್ಟಿ