ಉತ್ತರ ಪ್ರದೇಶ : ಯಾರೆ ಆದರೂ ನಮಗೆ ತೊಂದರೆ ಕೊಟ್ಟರೆ, ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪಾಕಿಸ್ತಾನದ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಪಾಕ್ ರೇಂಜರ್ಸ್ನಿಂದ 3 ವಾರ ಬಂಧನದಲ್ಲಿದ್ದ ಬಿಎಸ್ಎಫ್ ಯೋಧ ಭಾರತಕ್ಕೆ ವಾಪಸ್| Wagah-border
ಲಕ್ನೋದಲ್ಲಿ ಆಯೋಜಿಸಿರುವ ‘ಭಾರತ್ ಶೌರ್ಯ ತಿರಂಗ ಯಾತ್ರೆ’ಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು ಈ ತಿರಂಗ ಯಾತ್ರೆಯನ್ನು ನಡೆಸಿದ್ದಕ್ಕಾಗಿ ಕೇಂದ್ರ ನಾಯಕತ್ವ ಮತ್ತು ಪ್ರಧಾನಿ ಮೋದಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಭಯೋತ್ಪಾದನೆಯ ಮೂಲಕ ನಮ್ಮ ಶಾಂತಿ ಮತ್ತು ಸಾಮರಸ್ಯವನ್ನು ಭಂಗಗೊಳಿಸಲು ಪ್ರಯತ್ನಿಸಿದಾಗಲೆಲ್ಲಾ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡಿದೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ಆದರೆ ಯಾರಾದರೂ ನಮಗೆ ತೊಂದರೆ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಮ್ಮ ಸೈನಿಕರು ರವಾನಿಸಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
'भारत शौर्य तिरंगा यात्रा' के शुभारंभ अवसर पर लखनऊ में आयोजित कार्यक्रम में… https://t.co/FsHwYoeUgq
— Yogi Adityanath (@myogiadityanath) May 14, 2025
ಇದನ್ನೂ ಓದಿ: ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ: ಚೀನಾ ಪ್ರಯತ್ನ ವಿಫಲ| Arunachal
ಅಮಾನವೀಯ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಯೋಗಿ ಕೃತಜ್ಞತೆ ಸಲ್ಲಿಸಿದ್ದು, ಇಡೀ ಜಗತ್ತು ಈಗ ಭಾರತೀಯ ಸೈನಿಕರ ಶೌರ್ಯವನ್ನು ಗುರುತಿಸಿದೆ ಎಂದು ಸಂತಸ ಹೊರಹಾಕಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಅನಾಗರಿಕ ಕೃತ್ಯವನ್ನು ಇಡೀ ದೇಶ ಮತ್ತು ಜಗತ್ತು ಖಂಡಿಸಿತ್ತು. ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನ ಈ ಇಡೀ ಘಟನೆಯಲ್ಲಿ ಮೌನವಾಗಿತ್ತು. ಪಾಕಿಸ್ತಾನ ತನ್ನ ಕ್ರಮದಿಂದ ಪಾಠ ಕಲಿಯದ ನಂತರ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತು. ಮೊದಲ ದಿನ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಯ್ತು. ಈ ಭಯೋತ್ಪಾದಕರಿಗೆ ಅವರ ದುಷ್ಕೃತ್ಯಗಳಿಗೆ ಶಿಕ್ಷೆ ವಿಧಿಸಿದ ರೀತಿಯನ್ನು ಇಡೀ ಜಗತ್ತು ನೋಡಿ, ಭಾರತೀಯ ಸೈನಿಕರ ಶೌರ್ಯವನ್ನು ಒಪ್ಪಿಕೊಂಡಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.
(ಏಜೆನ್ಸೀಸ್)
ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪ್ರಮುಖ ಸಚಿವ ಸಂಪುಟ ಸಭೆ; ಭದ್ರತೆ ಕುರಿತು ಚರ್ಚೆ| CCS