ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಶ್ರೀಲಂಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಕೂಡ ನಿಖರವಾಗಿ 230 ರನ್ ಗಳಿಸಿ ಆಲೌಟ್ ಆಯಿತು. ಉಭಯ ತಂಡಗಳು ಸಮಾನ ಅಂಕ ಗಳಿಸಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.
ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯ ಟೈ ಆದರೂ ಪಂದ್ಯದ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಏಕೆ ಕರೆಯಲಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದಾರೆ. ಅಷ್ಟಕ್ಕೂ ಸೂಪರ್ ಓವರ್ ಏಕೆ ಆಯೋಜಿಸಿಲ್ಲ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇತ್ತ ಮೊದಲ ಪಂದಯ ಟೈ ಆಗಿರುವ ಕುರಿತು ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹತ್ ಶರ್ಮ ಹಲವು ವಿಚಾರಗಳ ಕುರಿತು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜೀವಂತ ಸಮಾಧಿ ಮಾಡಲಾಗಿದ್ದ ಯುವಕನನ್ನು ಮಣ್ಣು ಅಗೆದು ಬದುಕಿಸಿದ ಬೀದಿ ನಾಯಿಗಳು
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ರೋಹಿತ್, ಆಟಗಾರರು ಉತ್ತಮವಾಗಿ ಆಡಿದರು. ನಾವು ಸುಲಭವಾಗಿ ಗುರಿಯನ್ನು ತಲುಪಬಹುದಿತ್ತು. ಆದರೆ, ಬೇಗನೆ ವಿಕೆಟ್ ಕಳೆದುಕೊಂಡು ಪರಿಣಾಮ ರನ್ ಗಳಿಕೆ ನಿಧಾನವಾಯ್ತು. 14 ಎಸೆತಗಳಲ್ಲಿ 1 ರನ್ ಬಾಕಿತ್ತು ಅಷ್ಟೇ. ಅದನ್ನು ಕೈಚೆಲ್ಲಿದೇವು. ಸ್ಕೋರ್ ಗಳಿಸಲು ಯೋಗ್ಯವಾಗಿತ್ತು. 10 ಓವರ್‌ಗಳ ನಂತರ ಸ್ಪಿನ್ನರ್‌ಗಳು ಬರುವಾಗ ನಿಜವಾದ ಆಟ ಪ್ರಾರಂಭವಾಗಲಿದೆ ಅನ್ನೋದು ಗೊತ್ತಿತ್ತು
ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಜೊತೆಯಾಟದಿಂದಾಗಿ ನಾವು ಹಿಡಿತ ಸಾಧಿಸಿದ್ದೆವು. 14 ಎಸೆತಗಳು, 1 ರನ್ ಅಗತ್ಯ ಇತ್ತು. ಹೀಗಿದ್ದೂ ನಾವು ಪಂದ್ಯವನ್ನು ಕೈಚೆಲ್ಲಿದೇವು. ಶ್ರೀಲಂಕಾ ಚೆನ್ನಾಗಿ ಆಡಿತು. ಯಾರೇ ಆಗಲಿ ಉತ್ತಮವಾಗಿ ರನ್ ಗಳಿಸಲು ಪ್ರಯತ್ನಿಸಬೇಕು ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.