ನಮ್ಮ ಸೋಲಿಗೆ ಅವರಿಬ್ಬರೇ ಕಾರಣ: WTC Final ಸೋತ ಬೆನ್ನಲ್ಲೇ ಅಚ್ಚರಿ ಹೇಳಿಕೆ ನೀಡಿದ ಪ್ಯಾಟ್ ಕಮ್ಮಿನ್ಸ್! Pat Cummins

Pat Cummins

Pat Cummins : ಐಸಿಸಿ ಟೂರ್ನಮೆಂಟ್ ಫೈನಲ್​ಗಳಲ್ಲಿ ಹೆಚ್ಚು ಗೆಲುವಿನ ಪ್ರಮಾಣ ಹೊಂದಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡ ಸೋಲಿನ ರುಚಿ ತೋರಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸೀಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡಿತು. 282 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆಸೀಸ್ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಕಾಂಗರೂಗಳು ಮೇಲುಗೈ ಸಾಧಿಸಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಹಿಂದುಳಿಯುವ ಮೂಲಕ ಸೋಲುಂಡರು.

ಪ್ರೋಟಿಯಸ್ ತಂಡ ಕೇವಲ 5 ವಿಕೆಟ್‌ಗಳನ್ನು ಕಳೆದುಕೊಂಡು ಆಸೀಸ್ ತಂಡ ನೀಡಿದ್ದ ಗುರಿಯನ್ನು ತಲುಪಿತು. ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಐಡೆನ್ ಮಾರ್ಕ್ರಾಮ್ (136) ಅದ್ಭುತ ಶತಕದೊಂದಿಗೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕಳೆದ 15 ವರ್ಷಗಳಲ್ಲಿ ಆಸ್ಟ್ರೇಲಿಯಾ ಐಸಿಸಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಸೋತಿರುವುದು ಇದೇ ಮೊದಲು ಎಂಬುದು ಗಮನಾರ್ಹ.

ಪಂದ್ಯದ ನಂತರ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿ, ಚಾಂಪಿಯನ್ ದಕ್ಷಿಣ ಆಫ್ರಿಕಾವನ್ನು ಹೊಗಳಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಹರಿಣ ಪಡೆಗಳನ್ನು ಶ್ಲಾಘಿಸಿದರು. ಟೆಸ್ಟ್ ಕ್ರಿಕೆಟ್‌ನ ಪರಿಸ್ಥಿತಿಗಳು ಇತರ ಸ್ವರೂಪಗಳಿಗೆ ಹೋಲಿಸಿದರೆ ಸ್ವಲ್ಪ ಭಿನ್ನವಾಗಿರುತ್ತವೆ. ನಾವು ನಿರೀಕ್ಷಿಸದ ರೀತಿಯಲ್ಲಿ ಪರಿಸ್ಥಿತಿಗಳು ಬಹಳ ಬೇಗನೆ ಬದಲಾಗಬಹುದು. ಈ ಪಂದ್ಯದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸಿದ ನಂತರವೂ, ಎದುರಾಳಿ ತಂಡಕ್ಕೆ ಸರಿಯಾದ ಗುರಿಯನ್ನು ನಿಗದಿಪಡಿಸಲು ನಮಗೆ ಸಾಧ್ಯವಾಗಲಿಲ್ಲ ಎಂದರು.

ಇದನ್ನೂ ಓದಿ: ಆ ಇಬ್ಬರಿಂದಲೇ ನಾವು WTC Final ಗೆದ್ದಿದ್ದು: ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಹೇಳಿಕೆ ವೈರಲ್​! Temba Bavuma

ನಾವು ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರೆ, ಉತ್ತಮ ಸ್ಕೋರ್ ಗಳಿಸುತ್ತಿದ್ದೆವು. ಆದರೆ, ದಕ್ಷಿಣ ಆಫ್ರಿಕಾ ನಮಗೆ ಅವಕಾಶ ನೀಡಲಿಲ್ಲ. ಸ್ಟಾರ್ಕ್-ಹ್ಯಾಜಲ್‌ವುಡ್ ಕೊನೆಯ ಹಂತದಲ್ಲಿ ಪ್ರಮುಖ ಜೊತೆಯಾಟವನ್ನು ನೀಡಿದರು. ನಾವು ಪ್ರತಿ ರನ್‌ಗೂ ಚಪ್ಪಾಳೆ ತಟ್ಟಿ ಅಭಿನಂದಿಸಿದೆವು. ನಮ್ಮ ಬ್ಯಾಟಿಂಗ್ ಕ್ರಮಾಂಕದ ಟಾಪ್-7 ರಲ್ಲಿ ಕೆಲವು ಸಮಸ್ಯೆಗಳಿವೆ. ಭವಿಷ್ಯದಲ್ಲಿ ನಾವು ಅವುಗಳನ್ನು ಪರಿಹರಿಸುತ್ತೇವೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ತಂಡದ ಪ್ರತಿಯೊಬ್ಬ ಆಟಗಾರನು ಅದ್ಭುತ ಪ್ರದರ್ಶನ ನೀಡಿರುವುದರಿಂದ ನಾವು ಇಲ್ಲಿಯವರೆಗೆ ಬಂದಿದ್ದೇವೆ. ದುರದೃಷ್ಟವಶಾತ್, ಈ ಪಂದ್ಯದಲ್ಲಿ ನಾವು ನಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದರು.

ಈ ಪಂದ್ಯದಲ್ಲೂ ನಮ್ಮ ಬೌಲರ್‌ಗಳು ಮೊದಲ ಎರಡು ದಿನಗಳಲ್ಲಿ ಉತ್ತಮವಾಗಿ ಆಡಿದರು. ನಾವು ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆವು. ಲಿಯಾನ್ ನಾಥನ್ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ, ಅವರಿಗೆ ವಿಕೆಟ್ ಸಿಗಲಿಲ್ಲ. ಐಡೆನ್ ಮಾರ್ಕ್ರಾಮ್ ಮತ್ತು ಟೆಂಬಾ ಬವುಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರಿಬ್ಬರು ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ಪಂದ್ಯದ ನಾಲ್ಕು ದಿನಗಳ ಕಾಲ ಅವರು ನಿಯಂತ್ರಣ ಕಳೆದುಕೊಳ್ಳಲಿಲ್ಲ. ಅವರು ಗೆಲುವಿಗೆ ಸಂಪೂರ್ಣವಾಗಿ ಅರ್ಹರು ಎಂದು ಕಮ್ಮಿನ್ಸ್ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು. (ಏಜೆನ್ಸೀಸ್​)

ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್​ ಪತನ: ಓರ್ವ ಬಾಲಕಿ ಸೇರಿದಂತೆ 7 ಮಂದಿ​ ದುರ್ಮರಣ! Helicopter crash

ಎಜುಕೇಶನ್​ ವಿಚಾರದಲ್ಲಿ ಈ 3 ರಾಶಿಯವರನ್ನು ಯಾರಿಂದಲೂ ಮೀರಿಸಲಾಗದು! ನಿಮ್ಮ ರಾಶಿ ಯಾವುದು? Zodiac Signs

 

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…