

ನ್ಯೂಯಾರ್ಕ್: ನಾವು ಭಾರತದ ಜತೆಗಿನ ಅಮೆರಿಕದ ಐತಿಹಾಸಿಕ ಸ್ನೇಹಕ್ಕೆ ಹಾನಿ ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ(Marco Rubio) ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನದೊಂದಿಗಿನ ನಮ್ಮ ವ್ಯಾಪಾರವನ್ನು ಬಲಪಡಿಸಲು ಬಯಸುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೊಬಿಯೊ, ಭಾರತದೊಂದಿಗಿನ ನಮ್ಮ ಸ್ನೇಹವನ್ನು ಹಾಳು ಮಾಡಿ ಪಾಕಿಸ್ತಾನದ ಜತೆ ನಮ್ಮ ಸಂಬಂಧವನ್ನು ಬಲಪಡಿಸಲು ನಾವು ಬಯಸುವುದಿಲ್ಲ ಎಂದಿದ್ದಾರೆ. ಅಲ್ಲದೆ, ಭಯೋತ್ಪಾದನೆಯ ವಿರುದ್ಧ ಅಮೆರಿಕ ಮತ್ತು ಪಾಕಿಸ್ತಾನ ಈಗಾಗಲೇ ಒಟ್ಟಾಗಿ ಕೆಲಸ ಮಾಡುತ್ತಿದ್ದವು. ಆದರೆ ಇದು ಭಾರತದೊಂದಿಗಿನ ನಮ್ಮ ಸ್ನೇಹಕ್ಕೆ ಹಾನಿ ಮಾಡುವುದಿಲ್ಲ ಎಂದು ರೊಬಿಯೊ ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ರೊಬಿಯೊ, ಭಾರತೀಯ ರಾಜತಾಂತ್ರಿಕತೆಯು ತರ್ಕಬದ್ಧವಾಗಿದೆ. ನಾವು ಅನೇಕ ದೇಶಗಳೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ, ಕೆಲವು ದೇಶಗಳೊಂದಿಗೆ ನಾವು ಸಂಬಂಧವನ್ನು ಹೊಂದಿದ್ದಾರೆ. ಇದು ತರ್ಕಬದ್ಧ ವಿದೇಶಾಂಗ ನೀತಿಯ ಭಾಗವಾಗಿದೆ ಎಂದು ರೊಬಿಯೊ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಜತೆಗೆ ಉತ್ತಮ ಸಂಬಂಧವಿಲ್ಲದ ಕೆಲವು ದೇಶಗಳೊಂದಿಗೆ ಭಾರತ ಸಂಬಂಧ ಹೊಂದಿದೆ. ಇದು ಪ್ರಬುದ್ಧ ಮತ್ತು ಪ್ರಾಯೋಗಿಕ ವಿದೇಶಾಂಗ ನೀತಿಯ ಭಾಗವಾಗಿದೆ. ಅಲ್ಲದೆ, ಪಾಕಿಸ್ತಾನದೊಂದಿಗೆ ನಾವು ಮಾಡುವ ಕೆಲಸವು ಭಾರತದೊಂದಿಗಿನ ನಮ್ಮ ಸಂಬಂಧ ಅಥವಾ ಸ್ನೇಹಕ್ಕೆ ಹಾನಿ ಮಾಡುತ್ತದೆ ಎಂದು ನಾನು ನಂಬುವುದಿಲ್ಲ. ಇದು ಆಳವಾದ, ಐತಿಹಾಸಿಕ ಸಂಬಂಧವಾಗುದೆ ರೂಬಿಯೊ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ದೀರ್ಘಕಾಲದ ಉದ್ವಿಗ್ನತೆ ಇದೆ ಎಂದು ಅಮೆರಿಕಕ್ಕೆ ತಿಳಿದಿದೆ. ಆದರೆ ಸಾಧ್ಯವಾದಷ್ಟು ದೇಶಗಳೊಂದಿಗೆ ಸ್ನೇಹ ಬೆಳೆಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಉಭಯ ದೇಶಗಳ ಗುರಿಯಾಗಿದೆ ಎಂದು ರುಬಿಯೊ ಹೇಳಿದರು. ನಾವು ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈಗ ನಾವು ಅದನ್ನು ವಿಸ್ತರಿಸಲು ಬಯಸುತ್ತೇವೆ. ಇದು ಭಾರತ ಅಥವಾ ಬೇರೆಯವರೊಂದಿಗಿನ ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ರುಬಿಯೊ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಅಮೆರಿಕ ಅಧ್ಯಕ್ಷ ಟ್ರಂಪ್ರನ್ನು ಪದೇಪದೆ ಹೊಗಳಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಈ ವರ್ಷದ ಜೂನ್‌ನಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಟ್ರಂಪ್ರೊಂದಿಗೆ ರಹಸ್ಯ ಸಭೆ ನಡೆಸಿದರು. ಕಳೆದ ಸೆಪ್ಟೆಂಬರ್‌ನಲ್ಲಿ, ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಟ್ರಂಪ್ರನ್ನು ಶ್ವೇತಭವನದಲ್ಲಿ ಭೇಟಿಯಾಗಿದ್ದರು. ಅಲ್ಲದೆ, ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಪಾಕಿಸ್ತಾನದೊಂದಿಗೆ ಸಂಬಂಧವನ್ನು ಬಲಪಡಿಸಲು ನಿರಂತರವಾಗಿ ಪ್ರಯತ್ನಿಸಿದ್ದಾರೆ. (ಏಜೆನ್ಸೀಸ್)