ನೆಟ್ಟಣದಲ್ಲಿ ವಾಟರ್ ಬೆಡ್ ವಿತರಣೆ

New Project (6)
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ನೆಟ್ಟಣ ಬಾಲಕೃಷ್ಣ ಅವರಿಗೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿರುವ ವಾಟರ್ ಬೆಡ್ ವಿತರಿಸಲಾಯಿತು.

ಬಿಳಿನೆಲೆ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯೆ ಚಂದ್ರಾವತಿ ಅವರ ಪತಿ ಬಾಲಕೃಷ್ಣ ಅವರು ನೆಟ್ಟಣ ಪೇಟೆಗೆ ನಡೆದುಕೊಂಡು ಹೊಗುತ್ತಿರುವ ಸಂದರ್ಭ ಕಾರು ಡಿಕ್ಕಿಯಾಗಿ ಬೆನ್ನುಮೂಳೆ ಹಾಗೂ ಎರಡೂ ಕಾಲಿನ ಗಂಟು ಮುರಿತಕೊಳಗ್ಗಾಗಿ ಕುಳಿತುಕೊಳ್ಳಲೂ ಸಾಧ್ಯವಾಗದೆ ಮಲಗಿದಲ್ಲಿಯೇ ಇದ್ದು ಅವರಿಗೆ ಬೆಡ್ ಹಸ್ತಾಂತರಿಸಲಾಯಿತು.

ಬಿಳಿನೆಲೆ ವಲಯ ಜನಜಾಗೃತಿ ವೇದಿಕೆ ಸದಸ್ಯ ಗೋಪಾಲಕೃಷ್ಣ ಭಟ್ಟ್ ಬಿಳಿನೆಲೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ, ಬಿಳಿನೆಲೆ ಒಕ್ಕೂಟ ಅಧ್ಶಕ್ಷ ರಾಜೇಶ್ ಒಗ್ಗು, ನಿವೃತ್ತ ಶಿಕ್ಷಕಿ ಶಾರದಾ ಬಿಳಿನೆಲೆ, ಸೇವಾಪ್ರತಿನಿಧಿಗಳಾದ ಸತೀಶ್ ಎ., ಭವ್ಯಶ್ರೀ ಕೈಕಂಬ, ತರಬೇತಿ ಮೇಲ್ವಿಚಾರಕ ಅರ್ಜುನ್ ಪಾಟೀಲ್ ಬೆಳಗಾಂ ಹಾಗೂ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net