ನಿವೇಶನ ಕೊರತೆ ಬಗೆಹರಿಸಿ : ಅಧ್ಯಕ್ಷ ಅಬ್ದುಲ್ ರಹಿವಾನ್ ಮನವಿ: ಉಪ್ಪಿನಂಗಡಿ ಗ್ರಾ.ಪಂ. ನೀರು-ನೈರ್ಮಲ್ಯ ಸಮಿತಿ ಸಭೆ

upp
Published on

ಉಪ್ಪಿನಂಗಡಿ: ದ್ರವ ತ್ಯಾಜ್ಯ ನಿರ್ವಹಣೆಗೆ ಸಮರ್ಪಕ ಜಾಗದ ಕೊರತೆಯುಂಟಾಗಿದ್ದು, ಜಾಗ ನಿಗದಿಪಡಿಸಲು ಸಮಿತಿಯ ಸದಸ್ಯರು ಪ್ರಾವಾಣಿಕ ಪ್ರಯತ್ನ ನಡೆಸಬೇಕೆಂದು ಉಪ್ಪಿನಂಗಡಿ ಗ್ರಾ.ಪಂ.ನ ನೀರು ಹಾಗೂ ನೈರ್ಮಲ್ಯ ಸಮಿತಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರೇ ವಿನಂತಿಸಿದ ಟನೆ ಸಂಭವಿಸಿದೆ.

ಗ್ರಾ.ಪಂ.ನ ಸವಾಜ ಮಂದಿರದಲ್ಲಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಿವಾನ್ ಕೆ. ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಿ.ಡಿ.ಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಸಮಿತಿ ಸದಸ್ಯರು ತ್ಯಾಜ್ಯ ನಿರ್ವಹಣೆಯ ಬಗ್ಗೆ ಹಾಗೂ ಪ್ರಸಕ್ತ ತ್ಯಾಜ್ಯ ನಿರ್ವಹಣೆ ವಾಡುತ್ತಿರುವ ಬಸ್ ನಿಲ್ದಾಣದ ಪರಿಸರದ ಸ್ಥಳದ ಬಗ್ಗೆ ಪ್ರಸ್ತಾಪಿಸಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ವಾಡಬಹುದಾದ ಜಾಗವನ್ನು ತ್ಯಾಜ್ಯ ನಿರ್ವಹಣೆಗೆ ಬಳಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಹಲವು ಕಡೆಗಳಲ್ಲಿ ನಿವೇಶನಕ್ಕೆ ಕಂದಾಯ ಇಲಾಖೆಯೊಂದಿಗೆ ಕೇಳಿಕೊಂಡರೂ ಸಾಧ್ಯವಾಗಿಲ್ಲ. ಅಲ್ಲದೆ ಪಂಚಾಯಿತಿಗೆ ಸೇರಿದ ನಿವೇಶನದಲ್ಲಿ ತ್ಯಾಜ್ಯ ವ್ಯವಸ್ಥೆಗೆ ಮುಂದಾದರೆ ಅಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರಕ್ರಿಯೆ ಸಮಸ್ಯಾತ್ಮಕವಾಗಿದೆ ಎಂದರು.

ಸದಸ್ಯರಾದ ವಿಜೇತ ಪ್ರಭು, ಭಾರತಿ, ಯಶೋದಾ, ಚೈತ್ರಾ, ಚಂದ್ರಾವತಿ, ಜಯಂತ್ ಪರೋಳಿ, ಉಷಾ ನಾಯ್ಕ ಕೆ.ಪಿ., ಮಹಮ್ಮದ್, ಸಿದ್ದಿಕ್ ಕೆಂಪಿ, ಮಜೀದ್ ಉಪಸ್ಥಿತರಿದ್ದರು. ಜ್ಯೋತಿ ನಿರೂಪಿಸಿದರು. ಕಾರ್ಯದರ್ಶಿ ಗೀತಾ ಶೇಖರ ವಂದಿಸಿದರು.

ಗಾಳಿಗೆ ತಿರುಗುತ್ತಿದೆ ನೀರಿನ ಮೀಟರ್!

ಗ್ರಾಮದಲ್ಲಿ ನಡೆದ ಜಲಜೀವನ್ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಪಶು ಆಸ್ಪತ್ರೆ ಬಳಿ ನೀರು ಶೇಖರಣೆ ಟ್ಯಾಂಕ್ ಸೋರಿಕೆಯಾಗುತ್ತಿದೆ. ನಲ್ಲಿ ವ್ಯವಸ್ಥೆ ಭೂಮಿ ಅಡಿಯಲ್ಲಿ ಅಳವಡಿಸದೆ ರಸ್ತೆ ಮೇಲೆಯೇ ಇದ್ದು ಕೇಳುವವರೇ ಇಲ್ಲ. ನೀರಿನ ಮೀಟರ್‌ನಲ್ಲಿ ನೀರು ಬಾರದಿದ್ದರೂ ಗಾಳಿಗೆ ತಿರುಗುತ್ತಿದ್ದು, ಗ್ರಾಹಕನ ಗೋಳು ಕೇಳುವವರಿಲ್ಲದಂತಾಗಿದೆ. ಯೋಜನಾ ಕಾಮಗಾರಿಯನ್ನು ಹಸ್ತಾಂತರಕ್ಕೆ ಮುನ್ನ ಸೂಕ್ತವಾಗಿ ಗಮನಿಸುವಂತೆ ಆಗ್ರಹಿಸಿದರು. ಗ್ರಾಮದಲ್ಲಿ ನೀರಿನ ಕರ ವಸೂಲಿ ಬಾಕಿ ಇದ್ದು, ತಕ್ಷಣ ಮನೆ ಮನೆಗೆ ಸಿಬ್ಬಂದಿಯನ್ನು ಕಳುಹಿಸಿ ಹಣ ಸಂಗ್ರಹಿಸಿ ವಿದ್ಯುತ್ ಬಿಲ್ಲು ಸರಿದೂಗಿಸುವಂತೆ ಸಲಹೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net