VIDEO| "ಜೈ ಕರೊನಾ" ಎಂದು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದ ಯುವಕರ ಗುಂಪು: ಕಾರಣ ಕೇಳಿದ್ರೆ ಶಾಕ್​ ಆಗ್ತಿರಾ!

IIT Student
Published on

ನವದೆಹಲಿ: ಮಾರಣಾಂತಿಕ ಕರೊನಾ ವೈರಸ್​ ಭೀತಿಯಿಂದಾಗಿ ದೇಶದಲ್ಲಿ ತಾತ್ಕಾಲಿಕ ಬಂದ್​ ವಾತಾವರಣ ನಿರ್ಮಾಣವಾಗಿದೆ. ಶಾಲಾ-ಕಾಲೇಜುಗಳು ಸೇರಿದಂತೆ ಅನೇಕ ಕೇಂದ್ರಗಳು ಸ್ತಬ್ಧವಾಗಿವೆ.

ಈಗಾಗಲೇ ದೇಶದಲ್ಲಿ ಇಬ್ಬರನ್ನು ಬಲಿಪಡೆದುಕೊಂಡಿರುವ ಕರೊನಾಗೆ ಜಾಗತಿಕವಾಗಿ 5 ಸಾವಿರಕ್ಕೂ ಹೆಚ್ಚು ಮಂದಿ ಆಹುತಿಯಾಗಿದ್ದಾರೆ. ಇಂತಹ ಜೀವ ಭಯದ ವಾತವಾರಣದಲ್ಲೂ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿರುವ ವಿಡಿಯೋವೊಂದು ವೈರಲ್​ ಆಗಿದೆ.

"ಜೈ ಕರೊನಾ" ಎಂದು ಘೋಷಣೆ ಕೂಗಿ ದೆಹಲಿಯ ಕರಕೊರಮ್ ಹಾಸ್ಟೆಲ್​ನಲ್ಲಿ ಡ್ಯಾನ್ಸ್​ ಮೂಲಕ ಐಐಟಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ 8 ಗಂಟೆಗೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ.

ಮಾರ್ಚ್​​ 31ರವರೆಗೂ ಐಐಟಿ ತರಗತಿಗಳನ್ನು ಮತ್ತು ಪರೀಕ್ಷೆಗಳನ್ನು ರದ್ದು ಮಾಡಿರುವ ಖುಷಿಯಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ.

ಕರೊನಾ ವೈರಸ್​ ಪರಿಸ್ಥಿತಿಯನ್ನು ಅವಲೋಕಿಸಿ, ದೆಹಲಿ ಐಐಟಿ ಎಲ್ಲ ತರಗತಿಗಳು, ಪರೀಕ್ಷೆಗಳು ಮತ್ತು ಸಾರ್ವಜನಿಕವಾಗಿ ಒಂದೆಡೆ ಸೇರುವುದನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ. ಈ ಕಳಕಳಿಯನ್ನು ಎಲ್ಲರಿಗೂ ತಿಳಿಸಿ ಎಂದು ಐಐಟಿ ನಿರ್ದೇಶಕ ವಿ. ರಾಮ್​ಗೋಪಾಲ್​ ರಾವ್​ ಅವರು ಗುರುವಾರ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net