ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

Trump 24 Feb 20
Published on

ವಾಷಿಂಗ್ಟನ್​: ಜಾಗತಿಕವಾಗಿ ಮಹಾಮಾರಿ ಕರೊನಾ ವೈರಸ್​ ಮರಣ ಮೃದಂಗ ಮುಂದುವರಿಸಿದೆ. ಅಮೆರಿಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 50ರ ಗಡಿ ಮೀರಿದ್ದು, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಾಷ್ಟ್ರೀಯ ವಿಪತ್ತು ಘೋಷಿಸಿ ತಾವೂ ಸಹ ಕರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ಟ್ರಂಪ್​ ಅವರ ಕರೊನಾ ಪರೀಕ್ಷಾ ಫಲಿತಾಂಶ ನೆಗಿಟಿವ್​ ಆಗಿರುವುದಾಗಿ ವೈಟ್​ಹೌಸ್​ನ ವೈದ್ಯರೊಬ್ಬರು ಶನಿವಾರ ತಿಳಿಸಿದ್ದಾರೆ.

ಟ್ರಂಪ್​ ಅವರು ಫ್ಲೋರಿಡಾದಲ್ಲಿರುವ ತಮ್ಮ ರೆಸಾರ್ಟ್​ನಲ್ಲಿ ಬ್ರೆಜಿಲಿಯನ್​ ಅಧ್ಯಕ್ಷೀಯ ನಿಯೋಗದ ಅನೇಕ ಸದಸ್ಯರೊಟ್ಟಿಗೆ ಸಭೆ ನಡೆಸಿದ ಬಳಿಕ ಕರೊನಾ ಪರೀಕ್ಷೆ ಮಾಡಿಸಿದ್ದಾರೆ. ಬ್ರೆಜಿಲಿಯನ್​ ನಿಯೋಗದಲ್ಲಿ ಕೆಲವರಿಗೆ ಕರೊನಾ ಪಾಸಿಟಿವ್​ ಇದ್ದುದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಟ್ರಂಪ್​ ಅವರ ವೈದ್ಯಕೀಯ ಪರೀಕ್ಷೆ ಕುರಿತಾದ ಮಾಹಿತಿಯನ್ನು ಶನಿವಾರ ಸಂಜೆ ಖಚಿತಪಡಿಸಿಕೊಂಡೆ, ನೆಗಿಟಿವ್​ ಫಲಿತಾಂಶ ಬಂದಿದೆ ಎಂದು ವೈಟ್​ಹೌಸ್​ ವೈದ್ಯ ಮೆಮೊ ಹೇಳಿದ್ದಾರೆ.

ಮೊದಲೇ ನಿಗದಿಯಾಗಿದ್ದ ಬ್ರಿಟನ್​, ಐರ್ಲೆಂಡ್​ ಸೇರಿದಂತೆ ಇನ್ನಿತರ ದೇಶಗಳ ಭೇಟಿಯನ್ನು ಟ್ರಂಪ್​ ರದ್ದು ಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net