More

    ಕರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರದಿಂದ ಪರಿಹಾರ ಘೋಷಣೆ: ಇನ್ನಿತರ ಕ್ರಮಕ್ಕೂ ಸೂಚನೆ

    ನವದೆಹಲಿ: ದೇಶದಲ್ಲಿ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್​ನ್ನು ‘ಅಧಿಸೂಚಿತ ವಿಪತ್ತು’ ಎಂದು ಘೋಷಿಸಿದೆ. ಹಾಗೇ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸುವುದಾಗಿ ಸರ್ಕಾರ ಹೇಳಿದೆ.

    ಪರಿಹಾರ ಹಣ ಮತ್ತು ಇತರೆ ಕ್ರಮಗಳಿಗೆ ಪ್ರತಿಯೊಂದು ರಾಜ್ಯದ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್​ಡಿಆರ್​ಎಫ್​)ಯಿಂದ ಹಣ ಪಡೆದುಕೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಈ ಸಂಬಂಧ ಗೃಹ ಸಚಿವಾಲಯ ನೀಡಿರುವ ಪತ್ರದ ಪ್ರಕಾರ, ಕರೊನಾ ವೈರಸ್​ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ಹೆಚ್ಚುವರಿಯಾಗಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆಸ್ಪತ್ರೆಯ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳೇ ನಿಗದಿಪಡಿಸಲಿವೆ.

    ಇನ್ನಿತರ ಕ್ರಮಗಳ ವಿವರಣೆಯನ್ನು ಸರ್ಕಾರ ನೀಡಿದ್ದು, ತಾತ್ಕಾಲಿಕ ವಸತಿಗೆ ಪ್ರಾಮುಖ್ಯತೆ ಸೇರಿದಂತೆ ಬಂಧನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಹಾರ, ನೀರು, ಬಟ್ಟೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು. ಹೆಚ್ಚುವರಿ ಪರೀಕ್ಷಾ ಕೇಂದ್ರಗಳಿಗೆ ಮತ್ತು ಪೊಲೀಸ್, ಆರೋಗ್ಯ ಮತ್ತು ಪುರಸಭೆ ಅಧಿಕಾರಿಗಳಿಗೆ ರಕ್ಷಣಾತ್ಮಕ ಸಲಕರಣೆಗಳ ವೆಚ್ಚವನ್ನು ಪಾವತಿಸಲು ಎಸ್‌ಡಿಆರ್‌ಎಫ್ ಹಣವನ್ನು ಬಳಸುವುದಾಗಿ ಸರ್ಕಾರ ತಿಳಿಸಿದೆ.

    ಇಂತಹ ಖರ್ಚುಗಳಿಗೆ ಎಸ್​ಡಿಆರ್​ಎಫ್​ ನಿಧಿಯನ್ನು ಮಾತ್ರ ಬಳಸಿಕೊಳ್ಳಬೇಕು. ಎನ್​ಡಿಆರ್​ಎಫ್​ ನಿಧಿಯನ್ನು ಬಳಸಿಕೊಳ್ಳುವಂತಿಲ್ಲ ಎಂದು ಸರ್ಕಾರ ಹೇಳಿದ್ದು, ಸಲಕರಣೆಗಳ ಒಟ್ಟು ಖರ್ಚು ನಿಧಿಯ ವಾರ್ಷಿಕ ಹಂಚಿಕೆಯ ಶೇ 10 ರಷ್ಟನ್ನು ಮೀರಬಾರದು ಎಂದು ಹೇಳಿದೆ.

    ಕರೊನಾ ಸೋಂಕಿಗೆ ಈಗಾಗಲೇ ದೇಶದಲ್ಲಿ ಇಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 84ಕ್ಕೇ ಏರಿದೆ. ಅದರಲ್ಲಿ 10 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಜಾಗತಿಕವಾಗಿ ಕರೊನಾಗೆ ಬಲಿಯಾದವರ ಸಂಖ್ಯೆ 5000 ದಾಟಿದ್ದು, 138,000ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. (ಏಜೆನ್ಸೀಸ್​)

    ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಿಕೆ

    ರಾಷ್ಟ್ರಪತಿ ಭವನದ ದರ್ಬಾರ್ ಹಾಲ್​ನಲ್ಲಿ ಏ.3ರಂದು ಯೋಜನೆಗೊಂಡಿದ್ದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರೊನಾ ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ದಿನಾಂಕ ನಂತರದ ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದೆ.

    • ಪಶ್ಚಿಮ ಬಂಗಾಳದಲ್ಲಿ ಎರಡು ಮಕ್ಕಳು ಸೇರಿ ಒಟ್ಟು 13 ಜನರಲ್ಲಿ ಹಂದಿಜ್ವರ ಪತ್ತೆ.
    • ಚೀನಾ ಗಡಿಯಲ್ಲಿ ಮುಂಜಾಗ್ರತೆ ಹೆಚ್ಚಿಸುವ ಸಲುವಾಗಿ ಭಾರತ-ಟಿಬೆಟ್ ಗಡಿ ಪೊಲೀಸರಿಗೆ ಹೆಚ್ಚುವರಿ 47 ಗಡಿ ಹೊರ ಠಾಣೆಗಳು ಹಾಗೂ 12 ಸ್ಟೇಜಿಂಗ್ ಕ್ಯಾಂಪ್​ಗಳನ್ನು ನಿರ್ವಿುಸಲು ಸರ್ಕಾರದ ಅನುಮತಿ.
    • ಪ್ರಾಥಮಿಕ ಶಾಲೆಗಳ ಸುಮಾರು 81 ಸಾವಿರ ಶಿಕ್ಷಕರಿಗೆ ಆನ್​ಲೈನ್ ಮೂಲಕವೇ ತರಬೇತಿ ನೀಡಲು ಕೇರಳ ನಿರ್ಧಾರ. ಭಾರತದಲ್ಲಿ ಈ ರೀತಿಯ ತರಬೇತಿ ಇದೇ ಮೊದಲು.
    • ಲಂಡನ್​ನಲ್ಲಿ ನವಜಾತ ಶಿಶು ವೊಂದರಲ್ಲಿ ಕರೊನಾ ಸೋಂಕು ಇರುವುದು ದೃಢ. ಇದು ಜಗತ್ತಿನ ಅತ್ಯಂತ ಕಿರಿಯ ಸೋಂಕಿತ ವ್ಯಕ್ತಿಯಾಗಿದೆ.
    • ವಿವಿಧ ದೇಶಗಳಿಂದ ಪಂಜಾಬ್​ಗೆ ಮರಳಿರುವ ಕರೊನಾ ಪೀಡಿತ ಸುಮಾರು 335 ಜನರ ಪತ್ತೆಗೆ ತೀವ್ರ ಹುಡುಕಾಟ

    ಕರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಬೆಂಗಳೂರಿನ ಆಸ್ಪತ್ರೆಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts