

ಬೆಂಗಳೂರು: ಚೀನಾ ಮೂಲದ ಕರೊನಾ ವೈರಸ್ ವಿಶ್ವವ್ಯಾಪಿಯಾಗುತ್ತಿದೆ. ಕರ್ನಾಟಕಕ್ಕೂ ಸಹ ಕರೊನಾ ಬಿಸಿ ಮುಟ್ಟಿದ್ದು, ರಾಜ್ಯದ ಜನ ಮನೆಯಿಂದ ಹೊರ ಬರುವುದಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈರಸ್ನ ಬಗ್ಗೆ ಭಯ ಬೇಡ ಆದರೆ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ ಎಂದು ಸರ್ಕಾರ ಜನರಿಗೆ ತಿಳಿಸಿದೆ.
ಪ್ರತಿ ರಾಜ್ಯಗಳಲ್ಲಿಯೂ ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಆ ಆಸ್ಪತ್ರೆಗಳ ಹೊರೆತಾಗಿ ಬೇರೆ ಆಸ್ಪತ್ರೆಗಳಲ್ಲಿ ನಿಮಗೆ ಚಿಕಿತ್ಸೆ ಲಭ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ ನಾಲ್ಕು ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಗುರುತಿಸಲಾಗಿದ್ದು ಅದರ ಮಾಹಿತಿ ಇಲ್ಲಿದೆ.
1) ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ (RGICD)
ವಿಳಾಸ: ಸೋಮೇಶ್ವರನಗರ 1ನೇ ರಸ್ತೆ, ಧರ್ಮರಾಮ್ ಕಾಲೇಜು ಪೋಸ್ಟ್, 1ನೇ ಬ್ಲಾಕ್, ಹೊಂಬೆಗೌಡ ನಗರ, ಬೆಂಗಳೂರು, ಕರ್ನಾಟಕ 560029
ದೂರವಾಣಿ ಸಂಖ್ಯೆ: 080 26088500
2) ಮಣಿಪಾಲ್ ಆಸ್ಪತ್ರೆ
ವಿಳಾಸ: 98, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು, ಕರ್ನಾಟಕ 560017.
ದೂರವಾಣಿ ಸಂಖ್ಯೆ: 080-25211200
3) ನಾರಾಯಣ ಹೆಲ್ತ್
ವಿಳಾಸ: 258 / A, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಅನೆಕಲ್ ತಾಲ್ಲೂಕು, ಹೊಸೂರು ರಸ್ತೆ, ಬೆಂಗಳೂರು, ಕರ್ನಾಟಕ 560099
ದೂರವಾಣಿ ಸಂಖ್ಯೆ: 080 675 06870
4) ಫೋರ್ಟಿಸ್ ಆಸ್ಪತ್ರೆ
ವಿಳಾಸ: 154, 9, ಬನ್ನೇರುಘಟ್ಟ ಮುಖ್ಯ ರಸ್ತೆ, ಐಐಎಂ ಎದುರು, ಸಹ್ಯಾದ್ರಿ ಲೇಔಟ್, ಪಾಂಡುರಂಗ ನಗರ, ಬೆಂಗಳೂರು, ಕರ್ನಾಟಕ 560076
ದೂರವಾಣಿ ಸಂಖ್ಯೆ: 080-66214444