ಗೋವನ್ನು ಪ್ರಾಣಿ ವರ್ಗದಿಂದ ತೆಗೆದುಹಾಕಿ, ಇಲ್ಲಾಂದ್ರೆ... ಅವಿಮುಕ್ತೇಶ್ವರಾನಂದ ಮಹಾರಾಜ್ ಆಗ್ರಹ

Cow
Published on

ಜಬಲ್​ಪುರ್​​: ಭಾರತೀಯರು ವಿಶೇಷವಾಗಿ ಪೂಜಿಸುವ ಗೋಮಾತೆಯನ್ನು ಪ್ರಾಣಿ ವರ್ಗದಿಂದ ತೆಗೆದು ವಿಶೇಷ ಸ್ಥಾನಮಾನ ನೀಡಬೇಕೆಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಆಗ್ರಹಿಸಿದ್ದಾರೆ.

ಮಾಧ್ಯಮಗಳೊಟ್ಟಿಗೆ ಈ ಕುರಿತು ಮಾತನಾಡಿದ ಸರಸ್ವತಿ ಮಹಾರಾಜ್​, ಗೋವು ಬರಿ ಪ್ರಾಣಿಯಲ್ಲ ನಾವೆಲ್ಲರೂ ಗೋ ಮಾತೆಯನ್ನು ಪೂಜಿಸುತ್ತೇವೆ. ಅದು ನಮ್ಮ ತಾಯಿ. ಗೋವು ಕೇವಲ ಪ್ರಾಣಿ ಅಲ್ಲ, ನಮ್ಮ ತಾಯಿ ಎಂದು ನಾವು ಈಗಾಗಲೇ ಖಚಿತಪಡಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋವುಗಳನ್ನು ಪ್ರಾಣಿಗಳ ಪಟ್ಟಿಗೆ ಸೇರಿಸಿದೆ. ಆದ್ದರಿಂದ, ಗೋವುಗಳನ್ನು ಪ್ರಾಣಿಗಳ ಪಟ್ಟಿಯಿಂದ ತೆಗೆದು ನಮ್ಮ ತಾಯಿಯೆಂದು ಘೋಷಿಸಿ ವಿಶೇಷ ಸ್ಥಾನಮಾನ ನೀಡಬೇಕು.

ಇದಲ್ಲದೆ ದೇಶದಲ್ಲಿ ಗೋ ಮಾತೆಯ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಬೇಕಿದೆ. ಗೋಹತ್ಯೆಯಲ್ಲಿ ಭಾಗುಯಾಗಿರುವವರ ವಿರುದ್ಧ ಕ್ರಿಮಿನಲ್​ ಮೊಕದ್ದಮೆಗಳನ್ನು ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

ಗೋ ಮಾತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಪ್ರವಾಸ ನಡೆಯಲಿದ್ದು, ಅಯೋಧ್ಯೆಯಿಂದ ಪ್ರಾರಂಭವಾಗಲಿದೆ. ಗೋವನ್ನು ರಾಷ್ಟ್ರೀಯ ಮಾತೆ ಎಂದು ಘೋಷಿಸಬೇಕೆಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net