ಆತ ನಿಯಂತ್ರಣದಲ್ಲಿ ಇರಲಿಲ್ಲ... Virat Kohli ಕುರಿತು ಮಾಜಿ ಸ್ಟಾರ್​ ಆಟಗಾರನ ಹೇಳಿಕೆ ವೈರಲ್​

Virat Kohli
Published on

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುವಂತೆ ಯಾವುದಾದರು ಅಂತಾರಾಷ್ಟ್ರೀಯ ಅಥವಾ ದ್ವಿಪಕ್ಷೀಯ ಸರಣಿ ಆರಂಭವಾಗುವುದಕ್ಕೂ ಮುನ್ನ ಮಾಜಿ ಮತ್ತು ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಹಜ. ಆದರೆ, ಕೆಲವೊಮ್ಮೆ ಈ ಹೇಳಿಕೆಗಳು ಉಭಯ ತಂಡಗಳ ಆಟಗಾರರ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ವಿರಾಟ್​ ಕೊಹ್ಲಿ (Virat Kohli) ಕುರಿತು ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಲೆಜಂಡರಿ ಆಟಗಾರ ಬ್ರಾಡ್​ ಹಾಗ್​ (Brad Hogg) ಮಾತನಾಡಿದ್ದು, ಕೊಹ್ಲಿಯ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾನು ನೋಡಿರುವಂತೆ ವಿರಾಟ್​ (Virat Kohli) ತನ್ನ ಭಾವನೆಗಳನ್ನು ಹತ್ತೋಟಿಯಲ್ಲಿಟ್ಟುಕೊಳ್ಳುವುದು ಸೂಕ್ತ ಎಂದು ಭಾವಿಸುತ್ತೇನೆ. ಏಕೆಂದರೆ ಭಾವನೆಗಳಿಂದಲೇ ಆತನಲ್ಲಿ ಅಸಮರ್ಥತೆ ಹೆಚ್ಚಾಗುತ್ತಿದೆ. ಆತ ತನ್ನ ಭಾವನೆಗಳನ್ನು ಹತ್ತೋಟಿಯಲ್ಲಿಟ್ಟುಕೊಳ್ಳುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ.

ನನ್ನ ಪ್ರಕಾರ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ತಂಡವನ್ನು ಲಘುವಾಗಿ ಪರಿಗಣಿಸಿದ್ದೆ ಸರಣಿ ಸೋಲಿಗೆ ಪ್ರಮುಖ ಕಾರಣ ಎಂದು ಭಾವಿಸುತ್ತೇನೆ. ನಾನು ನೋಡಿದಂತೆ ವಿರಾಟ್​ (Virat Kohli) ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಆತ ಬೇಗನೆ ಔಟಾದ. ಆತ ನ್ಯೂಜಿಲೆಂಡ್​ ಬೌಲಿಂಗ್​​ಅನ್ನು ಅತಿಯಾಗಿ ವಿಶ್ಲೇಷಿಸಿದ ಪರಿಣಾಮ ಈ ರೀತಿಯಾಯಿತು. ಆತ ತನ್ನ ಭಾವನೆಗಳನ್ನು ಹತ್ತೋಟಿಯಲ್ಲಿ ಇಟ್ಟುಕೊಂಡಂತೆ ಕಂಡು ಬರಲಿಲ್ಲ. ನನ್ನ ಪ್ರಕಾರ ವಿರಾಟ್​ ಕೊಹ್ಲಿ (Virat Kohli) ಮೊದಲ ಎಸೆತದಿಂದಲೇ ಸ್ವಿಚ್​ ಆನ್​ ಆಗಬೇಕು ಎಂದು ಬ್ರಾಡ್​ ಹಾಗ್​ ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್​ 26ರಿಂದ ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ಆರಂಭವಾಗಲಿರುವ ಐದು ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar Trophy)​ ಟೆಸ್ಟ್​ ಸರಣಿಗೆ ಈಗಾಗಲೆ ಉಭಯ ತಂಡಗಳು ತಯಾರಿ ನಡೆಸುತ್ತಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (World Test Championship)​ 2023-25ರ ಅಡಿಯಲ್ಲಿ ಈ ಟೆಸ್ಟ್​ ಸರಣಿ (Test Series) ನಡೆಯಲಿದೆ.   ನವೆಂಬರ್​ 26ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net