

ಗುರುಗ್ರಾಮ: ಕೆಲ ದಿನಗಳ ಹಿಂದಷ್ಟೇ ಗುರುಗ್ರಾಮದ ಗಾಲ್ಫ್ಕೋರ್ಸ್ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ನಿಂದಾಗಿ ಕಾರುಗಳು ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಚಾರ ರಾಷ್ಟ್ರವ್ಯಾಪಿ ಸಖತ್ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು ಮತ್ತು ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಕಿಡಿಕಾರಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತಿದ್ದು, ಎಚ್ಚರಿಕೆಯ ಬೋರ್ಡ್ಗಳನ್ನು ಅಳವಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೊಸದಾಗಿ ಹಾಕಿದ್ದ ಸ್ಪೀಡ್ಬ್ರೇಕರ್ನಿಂದ BMW ಕಾರೊಂದು ಹಾರಿ ದೂರದಲ್ಲಿ ಹಾರಿ ಲ್ಯಾಂಡ್ ಆಗಿತ್ತು. ಇದಾದ ಬಳಿಕ ಎರಡು ಲಾರಿಗಳು ಕೂಡ ಇದೇ ರೀತಿ ಹಾರಿದ್ದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಇದೀಗ ಸಂಭಾವ್ಯ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತಿದ್ದು, ಸ್ಪೀಡ್ಬ್ರೇಕರ್ ಇರುವ ಬಗ್ಗೆ ಬೋರ್ಡ್ಅನ್ನು ಹಾಕಿದ್ದಾರೆ. ಇದಲ್ಲದೆ ರೋಡ್ನಲ್ಲಿ ರಿಫ್ಲೇಕ್ಟರ್ಗಳನ್ನು ಇಟ್ಟಿದ್ದಾರೆ. ಇದಲ್ಲದೆ ಅಧಿಕಾರಿಗಳನ್ನು ವೇಗವಾಗಿ ಬರುವ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ.