ಸಂಭಾಲ್: ಇತ್ತೀಚಿನ ವರ್ಷಗಳಲ್ಲಿ ಮದುವೆ ಕಾರ್ಯಕ್ರಮಗಳು ಒಂದಿಲ್ಲೊಂದು ಕಾರಣಕ್ಕೆ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿವೆ. ಅದು ಕ್ಷುಲಕ ಕಾರಣಕ್ಕೆ ಎಂದರೆ ವ್ಯಾಪಕ ಸದ್ದು ಮಾಡುತ್ತಿವೆ ಎಂಬುದು ಗಮನಾರ್ಹ ಸಂಗತಿ. ಇದೀಗ ಖರ್ಜೂರದ (Dates) ವಿಚಾರವಾಗಿ ಮದುವೆ ಮನೆ ರಣರಂಗವಾಗಿರುವ ಘಟನೆ ಉತ್ತರಪ್ರದೇಶದ (UttarPradesh) ಸಂಭಾಲ್ನಲ್ಲಿ ನಡೆದಿದೆ. ಈ ವಿಡಿಯೋ ವೈರಲ್ (Video Viral) ಆಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು (Video Viral), ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಸಚಿನ್ ಗುಪ್ತಾ ಎಂಬುವವರು ಹಂಚಿಕೊಂಡಿದ್ದು, ಜನ ಹೊಡೆದಾಡುವುದನ್ನು ನೋಡಬಹುದಾಗಿದೆ.
छुआरे के लिए युद्ध
संभल, यूपी में निकाह के बाद छुआरे बांटे जा रहे थे। कुछ युवकों ने छुआरे के पैकेट लूटने की कोशिश की। लड़की पक्ष ने आपत्ति जताई। विवाद शुरू हुआ। बस फिर क्या…लाठी-डंडे, कुर्सी, बेल्ट, लात-घूंसे चले। भगदड़ मच गई। पुलिस ने पहुंचकर युद्ध काबू में किया। pic.twitter.com/sEv1RvbHuT
— Sachin Gupta (@SachinGuptaUP) October 28, 2024
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ಕುರ್ಚಿಗಳನ್ನು ಎಸೆದಾಡುತ್ತ ಕೋಲುಗಳನ್ನು ಹಿಡಿದು ಒಬ್ಬರನ್ನೊಬ್ಬರು ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಬಿಡಿಸಲು ಹೋದವರನ್ನು ಸಹ ಥಳಿಸಲಾಗುತ್ತಿದ್ದು, ಈ ವಿಡಿಯೋ ಈವರೆಗೂ 3.65 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ವಿಡಿಯೋವನ್ನು ನೋಡಿರುವ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹೊರಹಾಕುತ್ತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು (Senior Police Officer), ಮದುವೆ ಕಾರ್ಯಕ್ರಮ ಒಂದರಲ್ಲಿ ಕರ್ಜೂರ ಹಂಚುವಾಗ ಈ ಘಟನೆ ನಡೆದಿದ್ದು, ವಧುವಿನ ಕಡೆಯವರು ಖರ್ಜೂರವನ್ನು ಹಂಚುತ್ತಿರುವಾಗ ಯಾರೋ ಡೇಟ್ಸ್ ಪ್ಯಾಕೆಟ್ಅನ್ನು ಕದ್ದಿದ್ದಾರೆ. ಈ ವಿಚಾರ ತಿಳಿದ ವಧುವಿನ ಕಡೆಯವರು ಖರ್ಜೂರದ ಪ್ಯಾಕೆಟ್ಅನ್ನು ಕದ್ದವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಿಧಾನವಾಗಿ ಈ ವಿಚಾರ ಮದುವೆಮನೆಯಲ್ಲಿ ಹರಡಿದ್ದು, ನಂತರ ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.
ಕಲ್ವರ್ಟ್ಗೆ ಡಿಕ್ಕಿ ಹೊಡೆದ Bus; 12 ಮಂದಿ ಸಾವು, 36ಕ್ಕೂ ಅಧಿಕ ಜನರಿಗೆ ಗಾಯ