ಚಂದ್ರನ ಮೇಲೆ ಕ್ರಿಕೆಟ್​? ಪಿಚ್​ ರಿಪೋರ್ಟ್​ ನೀಡಿದ ವಾಸಿಂ ಜಾಫರ್​!

chandra web
Published on

ಬೆಂಗಳೂರು: ಚಂದ್ರನ ಮೇಲೆ ಭಾರತ ತ್ರಿವರ್ಣ ಧ್ವಜ ನೆಟ್ಟಾಯಿತು, ಇನ್ನು ಅಲ್ಲಿ ಹೋಗಿ ಕ್ರಿಕೆಟ್​ ಆಡುವುದೊಂದೇ ಬಾಕಿ! ಚಂದ್ರಯಾನ-3 ಯಶಸ್ಸಿನ ಬಳಿಕ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್​ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್​ ಒಂದು ಅಂಥ ಕನಸುಗಳಿಂದ ಕೂಡಿರುವುದು ವಿಶೇಷ.

ಚಂದ್ರನ ಮೇಲೆ ಭಾರತದ ಲ್ಯಾಂಡರ್​ (ವಿಕ್ರಮ) ಯಶಸ್ವಿಯಾಗಿ ಲ್ಯಾಂಡಿಂಗ್​ ಆದ ಬಳಿಕ ಕಳುಹಿಸಿರುವ ಚಂದ್ರನ ಮೇಲ್ಮೈನ ಚಿತ್ರವನ್ನು ಕ್ರಿಕೆಟ್​ ಪಿಚ್​ಗೆ ಹೋಲಿಸಿ ವಾಸಿಂ ಜಾಫರ್​ ಇಂಥದ್ದೊಂದು ಟ್ವೀಟ್​ ಮಾಡಿದ್ದು, ಭಾರತೀಯ ಕ್ರಿಕೆಟ್​ ಪ್ರೇಮಿಗಳ ಮನ ಗೆದ್ದಿದ್ದಾರೆ.

ಚಂದ್ರ ಮೇಲ್ಮೈಯನ್ನು ಕ್ರಿಕೆಟ್​ ಪಿಚ್​ಗೆ ಹೋಲಿಸಿ ಅದರ ಪಿಚ್​ ರಿಪೋರ್ಟ್​ ನೀಡಿರುವ ದೇಶೀಯ ಕ್ರಿಕೆಟ್​ ದಿಗ್ಗಜ ವಾಸಿಂ ಜಾಫರ್​, "ಇಂದು ಖಂಡಿತವಾಗಿಯೂ ಮೊದಲು ಬ್ಯಾಟಿಂಗ್​ ಮಾಡಬಹುದಾದ ಪಿಚ್​. ನಾನು ಮೂವರು ಸ್ಪಿನ್ನರ್​ಗಳ ಜತೆಗೆ ಓರ್ವ ವೇಗಿಯನ್ನು ಆಯ್ದುಕೊಳ್ಳುತ್ತೇನೆ. ಜತೆ ಓರ್ವ ಆಲ್ರೌಂಡರ್​ ಇರಬೇಕು' ಎಂದು ತಮಾಷೆಯಾಗಿ ವಿಶ್ಲೇಷಿಸಿದ್ದಾರೆ. ಇದಕ್ಕೆ ಕ್ರಿಕೆಟ್​ ಪ್ರೇಮಿಗಳೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net