ಹೈದರಾಬಾದ್: ಆಕೆ ಅಮಾಯಕಿ, ಸಹಾಯ ಕೇಳಿದ ಮಹಿಳೆಗೆ ಅವನು ಮಾಡಿದ್ದು ಎಂಥ ಘೋರಕೃತ್ಯ ಗೊತ್ತಾ.. ತನ್ನನ್ನು ನಂಬಿದ ಆಕೆಯನ್ನು ಬರ್ಬರವಾಗಿ ಕೊಂದಿದ್ದಾನೆ. ಅದೂ ತನ್ನ ಗೆಳತಿಯೊಂದಿಗೆ ಸೇರಿ.
ಇದನ್ನೂ ಓದಿ: ‘ಸಿಎಂ ಮೋಸ ಮಾಡಿದ್ದಾರೆ, ನ್ಯಾಯಕ್ಕಾಗಿ ಹೋರಾಟ ನಡೆಸ್ತೇನೆ’: ಕೇರಳದಲ್ಲಿ ರ್ಯಾಗಿಂಗ್ಗೆ ಬಲಿಯಾದ ವಿದ್ಯಾರ್ಥಿ ತಂದೆ ಎಚ್ಚರಿಕೆ…
ಹೌದು, ಇಂತಹ ದುಷ್ಕೃತ್ಯ ಆಂಧ್ರದ ವಾರಾಂಗಲ್ ಜಿಲ್ಲೆಯಲ್ಲಿ ನಡೆದಿದೆ. ವಿವರಕ್ಕೆ ಹೋಗುವುದಾದರೆ..ಈ ಜಿಲ್ಲೆಯ ಮಲ್ಲಂಪಲ್ಲಿ ಮಂಡಲದ ಜಂಗಲಪಲ್ಲಿಯ ಅಕುನೂರಿ ಸುಪ್ರಿಯಾ (27) ಹೈದರಾಬಾದ್ ನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಶಶಿಕಾಂತ್ ಹೈಸ್ಕೂಲ್ನಲ್ಲಿ ಸಹಪಾಠಿಗಳು. ಸದ್ಯ ಈತನಿಗೆ ಇನ್ನೂ ಮದುವೆಯಾಗಿಲ್ಲ. ಆದರೆ ನಗರದಲ್ಲಿ ನೆಲೆಸಿರುವ ಮುಲುಗು ಜಿಲ್ಲೆಯ ಅಜ್ಮೀರಾ ಸಿರಿಶಾ ಎಂಬ ವಿವಾಹಿತ ಮಹಿಳೆಯೊಂದಿಗೆ ವಾಸವಾಗಿದ್ದಾನೆ.
ಇನ್ನು ಸುಪ್ರಿಯಾ ಮೈಸಂಪಲ್ಲಿಯ ವೆಂಗಲ ರಾಜ್ ಕಿರಣ್ ಎಂಬಾತನನ್ನು 8 ವರ್ಷದ ಹಿಂದೆ ವಿವಾಹವಾಗಿದ್ದು, ಪತಿ ಎಲೆಕ್ಟ್ರಾನಿಕ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. ಕೆಲ ದಿನಗಳ ಹಿಂದೆ ಸುಪ್ರಿಯಾ ಶಶಿಕಾಂತ್ ಗೆ ಕರೆ ಮಾಡಿ, ತನಗೆ ಆರೋಗ್ಯ ಸಮಸ್ಯೆಗಳಿವೆ ಹೈದರಾಬಾದ್‌ನಲ್ಲಿ ಒಳ್ಳೇಯ ಆಸ್ಪತ್ರೆ ಇದ್ರೆ ಹೇಳಿ ಎಂದಿದ್ದಾಳೆ. ಶಶಿಕಾಂತ್ ಮತ್ತು ಸುಪ್ರಿಯಾ ಆಗಾಗ ಫೋನ್ ನಲ್ಲಿ ಮಾತನಾಡುತ್ತಿರುವುದು ಶಿರೀಷಾಗೆ ಗೊತ್ತಾಗಿದೆ. ಅದರ ಬಗ್ಗೆ ಶಶಿಕಾಂತನ ಜೊತೆ ಜಗಳವಾಡಿದ್ದಳು. ಸುಪ್ರಿಯಾಳನ್ನೂ ಕರೆದು ವಾರ್ನಿಂಗ್ ಕೊಟ್ಟಿದ್ದು, ತಿಂಗಳ ಹಿಂದೆ ಶಶಿಕಾಂತ್ ಮತ್ತು ಷರೀಫಾ ಇಬ್ಬರೂ ಹೈದರಾಬಾದ್ ನಿಂದ ಸುಪ್ರಿಯಾ ಮನೆಗೆ ತೆರಳಿ ಮತ್ತೆ ಕರೆ ಮಾಡದಂತೆ ತಾಕೀತು ಮಾಡಿದರು.
ಇಬ್ಬರೂ ಬಂದಾಗ ಸುಪ್ರಿಯಾ ಒಬ್ಬಳೇ ಇದ್ದು, ಆಕೆ ಮೈಮೇಲೆ ಚಿನ್ನವಿರುವುದು ಗಮನಿಸಿದ್ದಾರೆ. ಅವರಿಗೆ ಆರ್ಥಿಕ ಸಮಸ್ಯೆ ಇದ್ದ ಕಾರಣ ಹೇಗಾದರೂ ಮಾಡಿ ಸುಪ್ರಿಯಾಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು.
ಯೋಜನೆಯ ಪ್ರಕಾರ ಮಾ.23ರಂದು ಮತ್ತೆ ಇಬ್ಬರೂ ಸುಪ್ರಿಯಾ ಮನೆಗೆ ಬಂದಿದ್ದಾರೆ. ಆಗಲೂ ಆಕೆ ಒಬ್ಬಳೇ ಇದ್ದು, ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲೆ ಮತ್ತು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಿಡಿದು ಬೈಕ್‌ನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ಸುಪ್ರಿಯಾ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ಆಕೆಯ ಸೆಲ್ ಫೋನ್ ಕಾಲ್ ಡೇಟಾ ಆಧರಿಸಿ ಸುಳಿವು ಪಡೆದುಕೊಂಡಿದ್ದಾರೆ. ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಶಿಕಾಂತ್ ಮತ್ತು ಶಿರೀಷಾ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳೂಹಿಸಲಾಗಿದೆ. ಇದಕ್ಕೇ ಹೇಳುವುದು, ಯಾರನ್ನೂ ನಂಬುವಂತಿಲ್ಲ ಎಂದು.