More

    ಚುನಾವಣೆಯಲ್ಲಿ ‘ಮ್ಯಾಚ್ ಫಿಕ್ಸಿಂಗ್’ಗೆ ಮೋದಿ ಯತ್ನ: ರಾಹುಲ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ “ಮ್ಯಾಚ್ ಫಿಕ್ಸಿಂಗ್” ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

    ಇದನ್ನೂ ಓದಿ: ಜೆಡಿಎಸ್​ ಚುನಾವಣಾ ಪೋಸ್ಟರ್​ನಲ್ಲಿ ಫೋಟೋ: ಕೇರಳ ಎಲ್​ಡಿಎಫ್​ ವಿಲವಿಲ – ಕಾನೂನು ಕ್ರಮದ ಎಚ್ಚರಿಕೆ!

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಪ್ರತಿಪಕ್ಷಗಳ ‘INDIA’ ಒಕ್ಕೂಟವು ರಾಷ್ಟ್ರ ರಾಜಧಾನಿಯಲ್ಲಿ ಲೋಕತಂತ್ರ ಬಚಾವೋ (ಪ್ರಜಾಪ್ರಭುತ್ವ ಉಳಿಸಿ) ರ‍್ಯಾಲಿಯಲ್ಲಿ ಮಾತನಾಡಿ, ನೀವು ಒಗ್ಗಟ್ಟಾಗಿ ಮತ ಚಲಾಯಿಸದಿದ್ದರೆ ಮೋದಿಯವರ ಮ್ಯಾಚ್ ಫಿಕ್ಸಿಂಗ್ ಯಶಸ್ವಿಯಾಗುತ್ತದೆ. ಅದು ಯಶಸ್ವಿಯಾದರೆ, ಸಂವಿಧಾನ ನಾಶವಾಗುತ್ತದೆ ಎಂದು ಹೇಳಿದರು.

    ಕಾಂಗ್ರೆಸ್ ಅತಿದೊಡ್ಡ ವಿರೋಧ ಪಕ್ಷ, ಅದರ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ ಎಂದು ಅವರು ಪ್ರಶ್ನಿಸಿದರು.

    ಬಿಜೆಪಿ ಸಂಸದರೊಬ್ಬರು ನಾವು 400 ಸ್ಥಾನಗಳನ್ನು ಪಡೆದಾಗ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದರು. ಇದು ಅವರ ಅಜೆಂಡಾದ ಭಾಗವೇ ಆಗಿದೆ ಎಂದರು.

    ಸಂವಿಧಾನವು ಜನರ ಧ್ವನಿಯಾಗಿದೆ ಮತ್ತು ಅದು ಮುಗಿದ ದಿನ, ದೇಶವು ಕೊನೆಗೊಳ್ಳುತ್ತದೆ ಎಂದು ರಾಹುಲ್​ ಗಾಂಧಿ ಹೇಳಿದರು.

    ಪಾಕ್​ ಕ್ರಿಕೆಟ್​ ತಂಡಕ್ಕೆ ಬಾಬರ್ ಮತ್ತೆ ಕ್ಯಾಪ್ಟನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts