ಹಮಾಸ್ ಶರಣಾಗಿ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತ್ರ ಯುದ್ಧ ಕೊನೆಗೊಳ್ಳುತ್ತದೆ: ಇಸ್ರೇಲ್​| Israel

Benjamin Netanyahu
Published on

Israel: ಗಾಜಾದ ಮೇಲೆ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸುತ್ತದೆ. ಆದರೆ, ಗಾಜಾವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಇಸ್ರೇಲ್ ಪ್ರಧಾನಿ,​ ಗಾಜಾದೊಳಗೆ ಹೊಸ ಭದ್ರತಾ ಪರಿಧಿಯನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ಇದು ಈಗಾಗಲೇ ಇಸ್ರೇಲ್ ಸರ್ಕಾರದಿಂದ ಮಾತ್ರ ನಿಯಂತ್ರಿಸಲ್ಪಡುವ ಒಂದು ಸ್ಥಳವಾಗಿದೆ. ಇಸ್ರೇಲ್ ಹಮಾಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಅಲ್ಲದೆ, ಒತ್ತೆಯಾಳುಗಳನ್ನು ಹಿಂದಿರುಗಿಸುವತ್ತ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ಈ ಯೋಜನೆಯು ಗಮನಾರ್ಹ ಮಿಲಿಟರಿ ಚಲನವಲನಗಳ ಬಗ್ಗೆ ಒಳಗೊಂಡಿರುತ್ತದೆ. ಆದರೆ, ಇದು ಸಂಪೂರ್ಣ ಪ್ರಾದೇಶಿಕ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ. ಅಂತಿಮವಾಗಿ ಗಾಜಾ ಸಂಪೂರ್ಣ ಪರಿವರ್ತನೆ ಆದ ನಂತರ ಆಡಳಿತವನ್ನು ಹಸ್ತಾಂತರಿಸಲಾಗುವುದು ಎಂದು ಪ್ರಧಾನಿ ನೆತನ್ಯಾಹು ಹೇಳಿದರು.

ಹಮಾಸ್ ಶರಣಾಗಿ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತ್ರ ಯುದ್ಧ ತಕ್ಷಣವೇ ಕೊನೆಗೊಳ್ಳಬಹುದು ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಮಿಲಿಟರಿ ಕಾರ್ಯಾಚರಣೆಗಳು ದೊಡ್ಡ ಪ್ರಮಾಣದ ನಾಗರಿಕ ಜೀವ ತಗೆಯುವುದರಿಂದ ತಪ್ಪಿಸುತ್ತವೆ ಎಂದು ಹೇಳಿದರು. 2023ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ನಂತರ ಪ್ರಾರಂಭವಾದ ಇಸ್ರೇಲಿ ದಾಳಿಯು ಗಾಜಾದಲ್ಲಿ ಕನಿಷ್ಠ 61,158 ಜನರನ್ನು ಕೊಂದಿದೆ ವರದಿಯಾಗಿದೆ.

ಇಸ್ರೇಲಿ ಪಡೆಗಳು ಹಮಾಸ್ ಅನ್ನು ತೀವ್ರವಾಗಿ ದುರ್ಬಲಗೊಳಿಸಿರುವುದಾಗಿ ಹೇಳಿಕೊಂಡಿದ್ದು, ಹಮಾಸ್ ಗಾಜಾ ಪ್ರದೇಶದಲ್ಲಿ ದಾಳಿಗಳನ್ನು ನಡೆಸುತ್ತಲೇ ಇದೆ. ಗಾಜಾದ ಮೂಲಸೌಕರ್ಯಗಳು ನಾಶವಾಗಿವೆ ಮತ್ತು ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net