

ಅಂಟಿಗುವಾ: 2023ರಲ್ಲಿ ಭಾರತದ ಅಥಿತ್ಯದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ ಆ ಬಳಿಕ ಮುಂಬೈ ಇಂಡಿಯನ್ಸ್ ನಾಯಕತ್ವದ ವಿಚಾರವಾಗಿ ಟ್ರೋಲ್ ಆಗಿದ್ದರು. ಟಿ20 ವಿಶ್ವಕಪ್ಗೆ ಆಯ್ಕೆಯಾಗುವುದು ಡೌಟ್ ಎಂದು ಹೇಳಲಾಗಿತ್ತಾದರು. ಪಾಂಡ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತಂಡದಲ್ಲಿ ಸ್ಥಾನ ಪಡೆದ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿರುವ ಹಾರ್ದಿಕ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನೂ ತಮ್ಮ ಅಲ್ರೌಂಡ್ ಪ್ರದರ್ಶನದ ಕುರಿತು ಮಾತನಾಡಿರುವ ಹಾರ್ದಿಕ್ ನಾನು ಯಾವ ತಂಡದ ವಿರುದ್ಧ ಆಡುವಾಗ ಗಾಯಗೊಂಡಿದ್ದೆ. ಇಂದು ಅದೇ ತಂಡದ ವಿರುದ್ಧ ಆಡಿ ಗೆದ್ದಿರುವುದು ನನಗೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.
ನಾನು ದೇಶ್ಕಕಾಗಿ ಆಡಲು ಅದೃಷ್ಠಶಾಲಿಯಾಗಿದ್ದೇನೆ. ಗಾಯಗೊಂಡ ಬಳಿಕ ಕಮ್ಬ್ಯಾಕ್ ಮಾಡಲು ಬಯಸಿದ್ದೆ ಮತ್ತು ಅದಕ್ಕಾಗಿ ಯೋಜನೆಗಳನ್ನು ರೂಪಿಸಿದ್ದೆ. ನಾನು ಈ ಬಗ್ಗೆ ನಮ್ಮ ಕೋಚ್ ಅವರ ಬಳಿ ಮಾತನಾಡಿದ್ದೆ. ಅವರು ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದೃಷ್ಟ ಕೈ ಹಿಡಿಯುತ್ತದೆ ಎಂದು ಹೇಳಿದ್ದರು. ಅವರು ಆಡಿದ ಆ ಮಾತುಗಳು ನನಗೆ ಚೆನ್ನಾಗಿ ಆಡಲು ಪ್ರೇರಣೆ ನೀಡಿತ್ತು.
ಟಿ20 ವಿಶ್ವಕಪ್ನಲ್ಲಿ ನಾವು ತಂಡವಾಗಿ ಆಡುತ್ತಿದ್ದು, ಅಂದುಕೊಂಡಂತೆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಅಂಟಿಗುವಾದ ಪಿಚ್ನಲ್ಲಿ ನಾವು 180 ರನ್ ಗಳಿಸುವುದು ಹೆಚ್ಚು ಎಂದು ಭಾವಿಸಿದ್ದೆವು. ಆದರೆ, 196 ರನ್ ಗಳಿಸಿದ್ದವು ಇದು ನಮ್ಮ ಗೆಲುವಿಗೆ ಸಹಕಾರಿಯಾಯ್ತು ಎಂದು ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಂದ್ಯದ ಬಳಿಕ ಹೇಳಿದ್ದಾರೆ.