ಹಾಲಿಡೇ ಮೂಡ್​​​ನಲ್ಲಿ ಬಾಲಿವುಡ್​​​ನ ಹಿರಿಯ ನಟಿಯರು …

Asha Parekh - Waheeda Rehman - Helen - Final
Published on

ಅಂಡಮಾನ್​: ಬಾಲಿವುಡ್​ನ ಜನಪ್ರಿಯ ಹಿರಿಯ ನಟಿಯರಾದ ವಹೀದಾ ರೆಹಮಾನ್​, ಆಶಾ ಪರೇಖ್​ ಮತ್ತು ಹೆಲನ್​ ಇದೀಗ ಅಂಡಮಾನ್​ನಲ್ಲಿ ಹಾಲಿಡೇ ಮೂಡ್​ನಲ್ಲಿದ್ದಾರೆ. ಹಲವು ದಿನಗಳಿಂದ ಅಲ್ಲೇ ಬೀಡುಬಿಟ್ಟಿರುವ ಅವರ ಫೋಟೋಗಳನ್ನು ತನುಜ್​ ಗಾರ್ಗ್​ ಎಂಬ ನಿರ್ದೇಶಕರು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

50 ಮತ್ತು 60ರ ದಶಕದ ಜನಪ್ರಿಯ ನಟಿಯರಾದ ಆಶಾ ಪರೇಖ್​, ವಹೀದಾ ರೆಹಮಾನ್​ ಮತ್ತು ಹೆಲನ್​ ಅವರದ್ದು ಐದು ದಶಕಗಳ ಸ್ನೇಹ. ಇತ್ತೀಚಿನ  ವರ್ಷಗಳಲ್ಲಿ ನಟನೆಯಿಂದ ದೂರವಾದರೂ, ಸ್ನೇಹವನ್ನು ಕಾಪಾಡಿಕೊಂಡಿರುವ ಈ ನಟಿಯರು, ಬಿಡುವಿದ್ದಾಗ ಆಗಾಗ ಭೇಟಿಯಾಗುತ್ತಿರುತ್ತಾರೆ. ಇತ್ತೀಚೆಗೆ, ಈ ಮೂವರೂ ತಮ್ಮ ಕುಟುಂಬದವರ ಸಮೇತ ಅಂಡಮಾನ್​ ದ್ವೀಪಗಳಿಗೆ ಸಮಯ ಕಳೆಯುವುದಕ್ಕೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಅವರು ದೂರದ ದ್ವೀಪಗಳಿಗೆ ಹಡಗಿನ ಮೂಲಕ ಹೋಗುವುದರ ಜೊತೆಗೆ, ಅಲ್ಲಿ ಸ್ನೋರ್​ಕೆಲ್ಲಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆ ಫೋಟೋಗಳನ್ನು ಹಂಚಿಕೊಂಡಿರುವ ತನುಜ್​, ಒಂದು ಪಕ್ಷ ದಿಲ್​ ಚಾಹ್ತಾ ಹೈ ಚಿತ್ರವನ್ನೇನಾದರೂ ಮರುಸೃಷ್ಟಿ ಮಾಡಿದರೆ, ಬಾಲಿವುಡ್​ನ ಈ ಜನಪ್ರಿಯ ಹಿರಿಯ ನಟಿಯರ ಜೊತೆಗೆ ಮಾಡಬೇಕು. ತಮ್ಮ ನಿವೃತ್ತಿಯ ದಿನಗಳನ್ನು ಮಜವಾಗಿ ಕಳೆಯುತ್ತಿರುವ ಆಶಾ ಪರೇಖ್​, ವಹೀದಾ ರೆಹಮಾನ್​ ಮತ್ತು ಹೆಲನ್​ ಇದೀಗ ಅಂಡಮಾನ್​ನಲ್ಲಿ ಮಜವಾದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ನೋಡಿ ನನ್ನ ಮುಖದಲ್ಲೊಂದು ಸ್ಮೈಲ್​ ಬಂತು … ಎಂದು ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net