

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ರಾಧೇ' ಚಿತ್ರವು ಮೇ ೧೩ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಜೀ೫ ಮತ್ತು ಜೀಪ್ಲೆಕ್ಸ್ ಓಟಿಟಿಗಳಲ್ಲಿ ಬಿಡುಗಡೆಯಾಗುವುದರ ಜತೆಗೆ, ಡಿಶ್, ಡಿ೨ಎಚ್, ಟಾಟಾ ಸ್ಕೆöÊ, ಏರ್‌ಟೆಲ್ ಡಿಜಿಟಲ್ ಟಿವಿ ಮುಂತಾದ ಡಿಟಿಎಚ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಇತ್ತೀಚೆಗಷ್ಟೇ ಚಿತ್ರವು ಸೆನ್ಸಾರ್ ಆಗಿದ್ದು, `ಯು/ಎ' ಪ್ರಮಾಣಪತ್ರ ಸಿಕ್ಕಿದೆ. ಚಿತ್ರವು ಒಂದು ಗಂಟೆ ೫೪ ನಿಮಿಷಗಳ ಅವಧಿಯದ್ದಾಗಿದ್ದು, ಈ ಚಿತ್ರವು ಸಲ್ಮಾನ್ ಖಾನ್ ಅವರ ಇದುವರೆಗಿನ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಅವಧಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸ್ವಾರಸ್ಯಕರ ವಿಷಯವೆಂದರೆ, ಸೆನ್ಸಾರ್ ಮಂಡಳಿಯು ಯಾವುದೇ ಕಟ್ಗಳಿಲ್ಲದೆ `ಯು/ಎ' ಪ್ರಮಾಣಪತ್ರ ಕೊಟ್ಟಿದ್ದರೂ, ಚಿತ್ರತಂಡದವರೇ ಸ್ವಯಂಪ್ರೇರಿತರಾಗಿ 21 ಕಟ್ಗಳನ್ನು ಮಾಡಿರುವುದು ವಿಶೇಷ. ಅದಕ್ಕೆ ಕಾರಣವೂ ಇದೆ. ಚಿತ್ರವೂ ನೇರವಾಗಿ ಓಟಿಟಿ ಮತ್ತು ಡಿಟಿಎಚ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಮತ್ತು ಫ್ಯಾಮಿಲಿ ಆಡಿಯನ್ಸ್ ನೋಡುತ್ತಿರುವುದರಿಂದ, ಆಕ್ಷನ್ ಮತ್ತು ಕ್ರೌರ್ಯ ಇರುವ ದೃಶ್ಯಗಳನ್ನು ಚಿತ್ರತಂಡದವರೇ ಸ್ವಯಂಪ್ರೇರಿತರಾಗಿ ತೆಗೆದು ಹಾಕಿದ್ದಾರಂತೆ.
ಇದಲ್ಲದೆ, ಪ್ರಮುಖುವಾಗಿ, ಮಕ್ಕಳು ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಒಂದೆರೆಡು ಶಾಟ್ಗಳು ಚಿತ್ರದಲ್ಲಿದ್ದು, ಅದನ್ನು ನೋಡಿದವರಿಗೆ ಕಿರಿಕಿರಯಾಗಬಾರದು ಎಂಬ ಕಾರಣಕ್ಕೆ, ಅಂತಹ ದೃಶ್ಯಗಳನ್ನೆಲ್ಲಾ ಚಿತ್ರತಂಡದವರೇ ಯಾರ ಅಭಿಪ್ರಾಯಕ್ಕೂ ಕಾಯದೇ ಕಿತ್ತು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
`ರಾಧೆ' ಚಿತ್ರದಲ್ಲಿ ಸಲ್ಮಾನ್, ದಿಶಾ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸಿದ್ದು, ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಫಿಲಂಸ್ ಬ್ಯಾನರ್‌ನಡಿ, ಈ ಚಿತ್ರವನ್ನು ಅವ ಸಹೋದರ ಸೊಹೈಲ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.