ಜಾಲ್ಸೂರು ವಿ.ಆರ್.ಡಿ.ಎಫ್ ಸಮಿತಿ ಅಧ್ಯಯನ ಪ್ರವಾಸ

pravasa
Published on

ಸುಳ್ಯ: ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಿಸಿದ, ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು, ಬುಧವಾರ ಬಳ್ಪ ಮತ್ತು ಪಂಜದ ವಿವಿಧ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿದರು.

ಬಳ್ಪದ ಪ್ರಮೋದ್ ಕುಮಾರ್ ಕೆ.ಎಸ್ ಅವರ ಜಮೀನಿನಲ್ಲಿ ಬೆಳೆಸಿದ ಡ್ರಾೃಗನ್ ಫ್ರುಟ್ ಕೃಷಿ, ಪಂಜದಲ್ಲಿರುವ ವನಸಿರಿ ಫಾರ್ಮ್‌ನ ದಯಾಪ್ರಸಾದ್ ಚೀಮುಳ್ಳು ಅವರ ಹಣ್ಣಿನ ತೋಟ, ಪಂಜಬೀಡು ಮನೆಯ ಕೃಷಿಕ ರಜಿತ್ ಭಟ್ ಅವರ ಸಮಗ್ರ ಕೃಷಿಯ ಬಗ್ಗೆ ಸದಸ್ಯರು ಮಾಹಿತಿ ಪಡೆದುಕೊಂಡರು.

ಸಮಿತಿಯ ವತಿಯಿಂದ ಪ್ರಮೋದ್ ಕುಮಾರ್ ಕೆ.ಎಸ್, ದಯಾಪ್ರಸಾದ್ ಚೀಮುಳ್ಳು, ರಜಿತ್ ಭಟ್ ಅವರನ್ನು ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ತಿರುಮಲೇಶ್ವರಿ ಅರ್ಭಡ್ಕ, ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net