ಕೆದ್ಕಾನ ಕಸ ವಿಲೇವಾರಿ ಘಟಕಕ್ಕೆ ವಿರೋಧ : ಹೋರಾಟ ಸಮಿತಿ ರಚನೆ

Published on

ಸುಳ್ಯ: ದುಗ್ಗಲಡ್ಕ ಸಮೀಪದ ಕೆದ್ಕಾನ ಎಂಬಲ್ಲಿ ಸುಳ್ಯ ನಗರ ಪಂಚಾಯಿತಿ ಕಸ ವಿಲೇವಾರಿ ಘಟಕ ಮಾಡುವ ಪ್ರಸ್ತಾಪಕ್ಕೆ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೆದ್ಕಾನ, ಕೊಯಿಕುಳಿ, ಗೋಂಟಡ್ಕ ಮಿತ್ತಮಜಲು, ಕುದ್ಲಾಜೆ, ದುಗ್ಗಲಡ್ಕ ಪ್ರದೇಶದ ನಾಗರಿಕರು ಸೋಮವಾರ ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದ ವಠಾರದಲ್ಲಿ ಸಭೆ ಸೇರಿ ಯಾವುದೇ ಕಾರಣಕ್ಕೂ ನಗರದ ಕಸವನ್ನು ಕೆದ್ಕಾನ ಪ್ರದೇಶದಲ್ಲಿ ಹಾಕಲು ಬಿಡುವುದಿಲ್ಲ ಎಂದು ಒಮ್ಮತದಿಂದ ತೀರ್ಮಾನ ತೆಗೆದುಕೊಂಡರಲ್ಲದೆ ಕಸ ವಿಲೇವಾರಿ ಪ್ರಕ್ರಿಯೆ ಮುಂದುವರಿದಲ್ಲಿ ಅದನ್ನು ತಡೆಗಟ್ಟಲು ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ.

ಅಧ್ಯಕ್ಷರಾಗಿ ಗಿರಿಧರ ಗೌಡ ಕೆದ್ಕಾನ, ಉಪಾಧ್ಯಕ್ಷರಾಗಿ ಶ್ರೀಧರ ಆಚಾರ್ಯ ಕೆದ್ಕಾನ, ಕಾರ್ಯದರ್ಶಿಯಾಗಿ ಶ್ಯಾಮ ಸುಂದರ್ ಮಿತ್ತಮಜಲು, ಜತೆ ಕಾರ್ಯದರ್ಶಿಯಾಗಿ ಸುಂದರ ಆಚಾರ್ಯ ಕೆದ್ಕಾನ ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಮನ್ಮಥ ಗೌಡ ಕೆದ್ಕಾನ, ಹುಕ್ರಪ್ಪ ಕೆದ್ಕಾನ, ಆನಂದ ಕುದ್ಪಾಜೆ, ಪ್ರಶಾಂತ್ ಮಿತ್ತಮಜಲು, ಶಿವಪ್ರಸಾದ್ ಕುದ್ಪಾಜೆ, ಯತೀಶ್ ರೈ ದುಗ್ಗಲಡ್ಕ, ಬಾಲಕೃಷ್ಣ ರೈ ದುಗ್ಗಲಡ್ಕ, ಕುಶ ನೀರಬಿದಿರೆ, ಲೋಹಿತ್ ಮಾಣಿಬೆಟ್ಟು, ಶಿವರಾಮ ಗೌಡ ಪಾನತ್ತಿಲ, ಸಂದೀಪ್ ರೈ ದುಗ್ಗಲಡ್ಕ, ಸತೀಶ್ ಕೆದಾನ, ಅರುಣ್ ಆಚಾರ್ಯ ಕೆದ್ಯಾನ, ದೇವಪ್ಪ ಆಚಾರ್ಯ ಕೆದ್ಕಾನ, ಗಿರೀಶ್ ರೈ ಮೂಡೆಕಲ್ಲು, ಆನಂದ ಆಚಾರ್ಯ ಕೆದ್ಕಾನ, ಬಾಲಚಂದ್ರ ಗೌಡ ಕೆದ್ಕಾನ, ಮಾಧವ ಗೌಡ ದುಗ್ಗಲಡ್ಕ, ನಿರಂಜನ ದುಗ್ಗಲಡ್ಕ ದಿನೇಶ್ ಡಿ.ಕೆ., ದಯಾನಂದ ಸಾಲಿಯಾನ್, ಸುಂದರ ರಾವ್, ರಾಘವೇಂದ್ರ ಭಟ್ ಕಲ್ಲಂಬೆ, ಕಜೆ ಕುಶಾಲಪ್ಪ ಗೌಡ, ಶೇಖರ್ ಕುದ್ಪಾಜೆ, ಲತೀಶ್ ಡಿ.ಎಸ್., ನಾರಾಯಣ ಮಣಿಯಾಣಿ ಸುಬ್ರಹ್ಮಣ್ಯ, ರೂಪೇಶ್ ನೀರಬಿದಿರೆ, ಪ್ರಶಾಂತ್ ನಡುಬೆಟ್ಟು, ಕೇಶವ ನಾಯ್ಕ ನಡುಬೆಟ್ಟು, ಪ್ರದೀಪ್ ನಡುಬೆಟ್ಟು, ದೇವಪ್ಪ ಆಚಾರ್ಯ, ಸತೀಶ್ ಕೆ.ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net