ಒಂದು ವರ್ಷದಿಂದ ಜಮ್ಮ-ಕಾಶ್ಮೀರದಲ್ಲೇ ವಾಸವಿದ್ದೀರಾ? ಹಾಗಾದ್ರೆ ಅಲ್ಲಿಯೇ ಸಿಗುತ್ತೆ ಮತದಾನದ ಹಕ್ಕು!

Voting
Published on

ಜಮ್ಮು: ಒಂದು ವರ್ಷಕ್ಕಿಂತ ಹೆಚ್ಚು ಸಮಯ ಜಮ್ಮುವಿನಲ್ಲೇ ವಾಸವಿರುವ ನಾಗರಿಕರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ತಹಸೀಲ್ದಾರ್​ಗಳಿಗೆ ಜಮ್ಮು ಸರ್ಕಾರ ಸೂಚಿಸಿದೆ.

ವರ್ಷದಿಂದ ಇಲ್ಲೇ ವಾಸವಿರುವ ನಾಗರಿಕರಿಗೆ ಮತದಾನದ ಹಕ್ಕು ನೀಡಲಾಗುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಚುನಾವಣಾ ಪಟ್ಟಿಗಳ ವಿಶೇಷ ಪರಿಷ್ಕರಣೆಯಲ್ಲಿ ಇವರ ಹೆಸರನ್ನು ಪರಿಗಣಿಸಲಾಗುತ್ತೆ. ಮತದಾರರ ಹೆಸರು ಸೇರ್ಪಡೆ, ಪಟ್ಟಿ ಪರಿಷ್ಕರಣೆ ಕಳೆದ ಸೆ.15ರಿಂದ ನಡೆಯುತ್ತಿದೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಮತದಾರರ ನೋಂದಣಿ, ಅಳಿಸುವಿಕೆ, ತಿದ್ದುಪಡಿ ಪ್ರಕ್ರಿಯೆ ನಡೆಯುತ್ತಿದೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ದಾಖಲಾತಿಗಾಗಿ ನೀರಿನ ಬಿಲ್​, ವಿದ್ಯುತ್​ ಬಿಲ್​, ಒಂದು ವರ್ಷದ ಗ್ಯಾಸ್​ ಕನೆಕ್ಷನ್ ಮಾಹಿತಿ, ಆಧಾರ್​ ಕಾರ್ಡ್, ಬ್ಯಾಂಕ್​ ಪಾಸ್​ಪುಸ್ತಕ, ಪಾಸ್​ಪೋರ್ಟ್​, ಬಾಡಿಗೆ ಮನೆಯ ಒಪ್ಪಂದ ಪತ್ರ ಮುಂತಾದ ದಾಖಲೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬಹುದು ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net