ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

moderna vaccine
Published on

ನವದೆಹಲಿ: ದೇಶೀಯ ಕರೊನಾ ನಿಗ್ರಹ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ (ಮಾನವರ ಮೇಲೆ ಪ್ರಯೋಗ) ಪ್ರಕ್ರಿಯೆ ಶುರುವಾಗಿದೆ. ಇದಕ್ಕಾಗಿ ಆರೋಗ್ಯವಂತ ವ್ಯಕ್ತಿಗಳ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

ಮೊದಲ ಹಂತದಲ್ಲಿ ಒಟ್ಟಾರೆ 375 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗುತ್ತದೆ. ಈ ಪೈಕಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞನ ಸಂಸ್ಥೆ (ಏಮ್ಸ್​) ಗರಿಷ್ಠ ನೂರು ಜನರನ್ನು ನೋಂದಾಯಿಸಿಕೊಳ್ಳಲಿದೆ.

ಭಾರತೀಯ ಬೆಳಗಾವಿ ಸೇರಿ ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಈ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ. ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಕಂಪನಿ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​​) ಸಹಯೋಗದಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.

ಸೋಮವಾರ (ಜು.20) ನೋಂದಣಿಗೆ ಚಾಲನೆ ನೀಡಲಾಗುತ್ತದೆ. ಯಾವುದೇ ಆರೋಗ್ಯ ಸಂಬಂಧಿ ತೊಂದರೆ ಇಲ್ಲದ ನೂರು ಜನರನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಎಂದು ಏಮ್ಸ್​ ಪ್ರಾಧ್ಯಾಪಕ ಡಾ. ಸಂಜಯ್​ ರೈ ಹೇಳಿದ್ದಾರೆ.

ನೋಂದಾಯಿಸಿಕೊಳ್ಳಲು ಇಚ್ಛೆಯುಳ್ಳವರು 7428847499 ಕರೆ ಮಾಡಬಹುದು ಇಲ್ಲವೇ ಎಸ್​ಎಂಎಸ್​ ಕಳುಹಿಸಬಹುದು. Ctaiims.covid19@gmail.comಗೆ ಮೇಲ್​ ಕೂಡ ಕಳುಹಿಸಬಹುದು. ಅಭ್ಯರ್ಥಿಗಳು 18-55 ವರ್ಷದೊಳಗಿನವರಾಗಿರಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಪಟನಾ ಏಮ್ಸ್​ನಲ್ಲಿ ಕ್ಲಿನಿಕಲ್​ ಟ್ರಯಲ್​ ಆರಂಭವಾಗಿದೆ. ಜತೆಗೆ, ಮೊಲದ ಹಾಗೂ ಎರಡನೇ ಹಂತ ಸೇರಿ ಒಟ್ಟಾರೆ 1,125 ಜನರನ್ನು ಆಯ್ಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net