ಕೊಕ್ಕರ್ಣೆಯಲ್ಲಿ ವಾಯ್ಸ ಆಫ್ ದಸರಾ

dasara
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಕೊಕ್ಕರ್ಣೆಯಲ್ಲಿ ಶಾರದೋತ್ಸವ ಕೊಕ್ಕರ್ಣೆ ದಸರಾ 2024 ಕಾರ್ಯಕ್ರಮ ನಡೆಯಿತು.
Published on

ಕೊಕ್ಕರ್ಣೆ: ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಕೊಕ್ಕರ್ಣೆಯಲ್ಲಿ ಶರನ್ನವರಾತ್ರಿ ಉತ್ಸವ ಸಮಿತಿ, 32ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಹಾಗೂ ತೃತೀಯ ವರ್ಷದ ಶಾರದೋತ್ಸವ ಕೊಕ್ಕರ್ಣೆ ದಸರಾ 2024 ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಅಪ್ರತಿಮ ಸಂಗೀತ ರಿಯಾಲಿಟಿ ಸ್ಪರ್ಧೆ ವಾಯ್ಸ ಆಫ್ ದಸರಾ ಜರುಗಿತು. ಶರನ್ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಶ್ಯಾನುಭಾಗ್ ಕೊಕ್ಕರ್ಣೆ, ಉದ್ಯಮಿ ಆಲ್ವಿನ್ ಅಂದ್ರಾದೆ ಬ್ರಹ್ಮಾವರ, ವಾಯ್ಸ ಆಫ್ ದಸರಾ ಇದರ ತೀರ್ಪುಗಾರರಾದ ಯಶವಂತ್ ಎಂ.ಜಿ. ಹಾಗೂ ಶ್ರಾವ್ಯಾ ಬಾಸ್ರಿ, ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಒಟ್ಟು 16 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ಪೂರ್ವಿ ಶೆಟ್ಟಿ ಮಣಿಪಾಲ ಪ್ರಥಮ, ದ್ವಿತೀಯ ಅನನ್ಯ ನಾರಾಯಣ ಮಂಗಳೂರು, ತೃತೀಯ ವೃದ್ಧಿ ಆರ್.ಬ್ರಹ್ಮಾವರ ಅವರು ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net