More

    11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕರ ಹೊಸ ಚಿತ್ರ …

    ಮುಂಬೈ: ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಂತರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಯಾವುದಿರಬಹುದು ಎಂದು ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ, ವಿವೇಕ್​ ಈ ಪ್ರಶ್ನೆಗೆ ಉತ್ತರ ಕೊಟ್ಟಿರಲಿಲ್ಲ. ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದ ಅವರು, ಹೊಸ ಚಿತ್ರದೊಂದಿಗೆ ವಾಪಸ್ಸು ಬರುವ ಹಿಂಟ್​ ಕೊಟ್ಟಿದ್ದರು.

    ಇದನ್ನೂ ಓದಿ: ಸಂದೇಶದೊಂದಿಗೆ ಮನರಂಜನೆ … ಪ್ರಜ್ವಲ್​ ‘ಅಬ್ಬರ’ ನ.18ಕ್ಕೆ

    11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ 'ದಿ ಕಾಶ್ಮೀರ್​ ಫೈಲ್ಸ್​' ನಿರ್ದೇಶಕರ ಹೊಸ ಚಿತ್ರ …ಈಗ ವಿವೇಕ್​ ಕೊನೆಗೂ ತಮ್ಮ ಹೊಸ ಚಿತ್ರದ ಘೋಷಣೆಯನ್ನು ಗುರುವಾರ ಮಾಡಿದ್ದಾರೆ. ತಮ್ಮ ಹೊಸ ಚಿತ್ರದ ‘ದಿ ವ್ಯಾಕ್ಸಿನ್​ ವಾರ್​’ನ ಮೊದಲ ಪೋಸ್ಟರ್​ವೊಂದನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ‘ದಿ ವ್ಯಾಕ್ಸಿನ್​ ವಾರ್​’ ಚಿತ್ರವು ನೈಜ ಘಟನೆಯೊಂದನ್ನು ಆಧರಿಸಿದೆಯಂತೆ. ಇದು ಕರೊನಾ ಕುರಿತಾದ ಕಥೆಯಾ? ಎಂಬ ಬಗ್ಗೆ ಅವರು ಮಾತಾಡಿಲ್ಲ. ‘ನಮಗೆ ಗೊತ್ತೇ ಆಗದಂತೆ, ನಾವು ಗೆದ್ದ ಒಂದು ಯುದ್ಧದ ಕಥೆ ಇದು …’ ಎಂದು ಹೇಳಿಕೊಂಡಿರುವ ಅವರು, ಈ ಚಿತ್ರವನ್ನು 2023ರ ಸ್ವಾತಂತ್ರ್ಯ ದಿನದಂದು ಬಿಡಗುಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ.

    ಇದನ್ನೂ ಓದಿ: ಹೊಸಬರ ‘ಕಂಬ್ಳಿಹುಳ’ಕ್ಕೆ ಹಳಬರ ಬೆಂಬಲ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​

    ಐ ಆಮ್​ ಬುದ್ಧ ಸಂಸ್ಥೆಯಡಿ ಈ ಚಿತ್ರವನ್ನು ನಟಿ ಪಲ್ಲವಿ ಜೋಷಿ ನಿರ್ಮಿಸುತ್ತಿದ್ದಾರೆ. 11 ಭಾಷೆಗಳಲ್ಲಿ ಈ ಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ.

    ಮತ್ತೆ ಬಂದ ದಂಡುಪಾಳ್ಯ ಗ್ಯಾಂಗ್​ … ‘ಹುಬ್ಬಳ್ಳಿ ಡಾಬಾ’ ಕ್ಲೈಮ್ಯಾಕ್ಸ್​ನಲ್ಲಿ ಎಂಟ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts