More

    ಇರ್ಫಾನ್​, ರಿಷಿ ಸಾವಿನ ಬಳಿಕ ಮತ್ತೊಬ್ಬ ಬಾಲಿವುಡ್​ ನಟ ಅಸ್ವಸ್ಥ; ನನಗೇನೂ ಆಗಿಲ್ಲ! ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ

    ಕಳೆದ ಎರಡು ದಿನಗಳಿಂದ ಬಾಲಿವುಡ್​ ನಿಜಕ್ಕೂ ಕಳಾಹೀನವಾಗಿದೆ. ಖ್ಯಾತ ನಾಮ ಇಬ್ಬರು ಕಲಾವಿದರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ. ಬುಧವಾರ ಇರ್ಫಾನ್ ಖಾನ್​ ಸಾವನ್ನಪ್ಪಿದರೆ, ಗುರುವಾರ ರಿಷಿ ಕಪೂರ್ ಕೊನೆಯುಸಿರೆಳೆದರು. ಇವೆರಡು ದುರಂತ ಸುದ್ದಿಗಳ ನಡುವೆ ಬಾಲಿವುಡ್​ನಿಂದ ಮತ್ತೊಂದು ಶಾಕಿಂಗ್​ ಸುದ್ದಿ ಹೊರಬಂದಿತ್ತು. ಆದರೆ, ಆ ಸುದ್ದಿ ಸುಳ್ಳು ಎಂಬುದು ಗೊತ್ತಾಗುತ್ತಿದ್ದಂತೆ ಸಿನಿಲೋಕ ನಿಟ್ಟುಸಿರು ಬಿಟ್ಟಿತ್ತು.


    ಹೌದು, ಬಾಲಿವುಡ್​ ಕಂಡ ಅದ್ಭುತ ನಟ ನಾಸೀರುದ್ದೀನ್​ ಷಾ ವಯಸ್ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಅವರ ಆರೋಗ್ಯದಲ್ಲೂ ಏರುಪೇರು ಕಂಡುಬಂದಿದೆ ಎಂಬ ಸುದ್ದಿ ಸಿನಿಮಾ ಪ್ರೇಮಿಗಳ ನಿದ್ದೆಗೆಡಿಸಿತ್ತು. ಅದೃಷ್ಟವಶಾತ್​ ನಾಸೀರುದ್ದೀನ್​ ಆರೋಗ್ಯ ಸ್ಥಿರವಾಗಿದೆ ಎಂದು ನಾಸೀರ್ ಪುತ್ರ ವಿವಾನ್ ಷಾ ಸ್ಪಷ್ಟಪಡಿಸಿದ್ದಾರೆ.


    ‘ಅಪ್ಪ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿವೆ. ಅವೆಲ್ಲವೂ ಸುಳ್ಳು!’ ಎಂದಿದ್ದಾರೆ. ಇತ್ತ ಫೇಸ್​ಬುಕ್​ನಲ್ಲಿ ಸ್ವತಃ ನಾಸೀರ್​ ಹರಿದಾಡಿದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಕ್ಕೆ ಎಲ್ಲರಿಗೂ ಧನ್ಯವಾದ. ನಾನು ಮನೆಯಲ್ಲೇ ಆರಾಮವಾಗಿದ್ದೇನೆ. ದಯಾಮಾಡಿ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದಿದ್ದಾರೆ. (ಏಜೆನ್ಸೀಸ್​)

    ಮರುಪ್ರಸಾರವಾಗಿದ್ದ ರಾಮಾಯಣ ಸೃಷ್ಟಿಸಿತು ವಿಶ್ವದಾಖಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts